ADVERTISEMENT

ವಾಚಕರ ವಾಣಿ | ತೃತೀಯಲಿಂಗಿಗಳ ಮಾದರಿ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 19:30 IST
Last Updated 9 ಆಗಸ್ಟ್ 2020, 19:30 IST

ರಾಜ್ಯದ ಕೆಲವೆಡೆ ಸ್ವ-ಉದ್ಯೋಗದಲ್ಲಿ ನೆಮ್ಮದಿ ಕಂಡುಕೊಂಡಿರುವ ತೃತೀಯಲಿಂಗಿಗಳ ಕುರಿತ ವಿಶೇಷ ವರದಿ (ಪ್ರ.ವಾ., ಆ. 9) ಆತ್ಮವಿಶ್ವಾಸದ ಪ್ರತೀಕದಂತಿತ್ತು. ಟೋಲ್‌ಗೇಟ್, ರಸ್ತೆ ಸಂಚಾರ ದೀಪಗಳ ಬಳಿ, ಅಂಗಡಿಗಳ ಸನಿಹ ಚಪ್ಪಾಳೆ ತಟ್ಟುತ್ತಾ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಾರೆ ಎಂಬ ಜನಾಭಿಪ್ರಾಯವನ್ನು ಸುಳ್ಳು ಮಾಡಿದ ಯಶೋಗಾಥೆ ಓದಿ ಸಂತೋಷವಾಯಿತು.

ಲಾಕ್‌ಡೌನ್‌ನಿಂದ ಜನಜೀವನ ಆಸ್ತವ್ಯಸ್ತವಾಗಿ ಹೆಚ್ಚಿನವರ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಸಂದ‌ಭ೯ದಲ್ಲಿ ಭಿಕ್ಷಾಟನೆ ಮಾಡುವುದು ತರವಲ್ಲ ಎಂದು ನಿರ್ಧರಿಸಿ, ಸ್ವಾವಲಂಬಿ ಬದುಕು ಸಾಗಿಸಲು ಮುಂದಾಗಿರುವ ಇವರ ನಡೆ ಅಭಿನಂದನೆಗೆ ಅರ್ಹ.

-ಎ.ಜಿ.ಸುರೇಂದ್ರಬಾಬು, ಹೊಳಲ್ಕೆರೆ, ಚಿತ್ರದುಗ೯

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.