ADVERTISEMENT

ವಾಚಕರ ವಾಣಿ: ಕಲ್ಯಾಣ ಮಂಟಪ ತೆರೆಯಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 11 ಜೂನ್ 2021, 19:30 IST
Last Updated 11 ಜೂನ್ 2021, 19:30 IST

ಲಾಕ್‌ಡೌನ್‌ನಿಂದ ಕಲ್ಯಾಣ ಮಂಟಪಗಳು ಬಂದ್‌ ಆಗಿರುವುದರಿಂದ, ನಿಗದಿಯಾಗಿದ್ದ ಮದುವೆಗಳನ್ನು ಕೆಲವರು ಮುಂದೂಡಿದ್ದಾರೆ. ಇನ್ನು ಕೆಲವರು ಮನೆಯ ಮುಂದೆಯೇ ಹೇಗೋ ಮಾಡಿ ಮುಗಿಸಿದ್ದಾರೆ. ಈ ಹಿಂದೆ ಸರ್ಕಾರವು ಕಲ್ಯಾಣ ಮಂಟಪಗಳಿಗೆ ಇಂತಿಷ್ಟೇ ಜನರು ಭಾಗವಹಿಸಬೇಕೆಂದು ನಿಗದಿಪಡಿಸಿತ್ತು. ಆದರೆ ಈಗ ಮನೆಗಳಲ್ಲೇ ಮದುವೆ ಕಾರ್ಯ ನಡೆಸಬೇಕೆಂದಿರುವುದು ಎಷ್ಟು ಸರಿ? ಮದುವೆ ಕಾರ್ಯಗಳನ್ನು ಮಾಡಲು ಗ್ರಾಮೀಣ ಭಾಗಗಳಲ್ಲಿ ವಿಶಾಲವಾದ ಜಾಗವಿರುತ್ತದೆ, ಆದರೆ ನಗರಗಳಲ್ಲಿ ಮನೆಮಂದಿ ವಾಸಿಸುವುದೇ ಕಷ್ಟ, ಅಂತಹದ್ದರಲ್ಲಿ ಮದುವೆ ಕಾರ್ಯ ಹೇಗೆ ಮಾಡುವುದು?

ಕಲ್ಯಾಣ ಮಂಟಪಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಕಷ್ಟವೇನಲ್ಲ. ಆದರೆ ಇಕ್ಕಟ್ಟಾದ ಮನೆಗಳಲ್ಲಿ ಅಂತರ ಕಾಪಾಡುವುದೇ ಕಷ್ಟ. ನೆಂಟರು ಬಂದರೂ ಉಳಿಸಿಕೊಳ್ಳುವುದು ಇನ್ನೂ ಕಷ್ಟ. ಈ ಎಲ್ಲಾ ಪ್ರಕ್ರಿಯೆಗಳಿಂದ ಕೊರೊನಾಕ್ಕೆ ನಾವೇ ಮುಕ್ತ ಆಹ್ವಾನ ನೀಡಿದಂತಾಗುತ್ತದೆಯಲ್ಲವೇ? ಇನ್ನಾದರೂ ಸರ್ಕಾರವು ಕಲ್ಯಾಣ ಮಂಟಪಗಳಲ್ಲಿ ಮದುವೆ ನಡೆಸಲು ಷರತ್ತುಬದ್ಧ ಅನುಮತಿ ನೀಡಿ ಜನರಿಗೆ ಅನುಕೂಲ ಮಾಡಿಕೊಡಬೇಕು.

-ಮುರುಗೇಶ ಡಿ., ದಾವಣಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.