ADVERTISEMENT

ಆಹಾರ ಸಂಪಾದನೆಯನ್ನೇ ಮರೆತಿವೆ ಈ ಮಂಗಗಳು!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಮಾರ್ಚ್ 2020, 18:03 IST
Last Updated 20 ಮಾರ್ಚ್ 2020, 18:03 IST

ಹಂಪಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಹಸಿದಿದ್ದ ಮಂಗಗಳಿಗೆ ವಿವಿಧ ಸಂಘಗಳ ಸದಸ್ಯರು ಸೇರಿ ಆಹಾರ ನೀಡುವ ಮೂಲಕ ಮಾನವೀಯತೆ‌ ಮೆರೆದಿದ್ದಾರೆ. ಹಾಗಿದ್ದರೆ ಮಂಗಗಳೇಕೆ ನಾಲ್ಕು ದಿನಗಳಿಂದ ಉಪವಾಸದಿಂದ ಇದ್ದವು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಏಕೆಂದರೆ, ಹಂಪಿಗೆ ಬರುವ ಪ್ರವಾಸಿಗರು ನೀಡುವ ಆಹಾರವನ್ನೇ ಇವು ಸಂಪೂರ್ಣವಾಗಿ ಅವಲಂಬಿಸಿ, ಸ್ವಂತಕ್ಕೆ ಆಹಾರ ಸಂಪಾದನೆ ಮಾಡುವ ಕೌಶಲವನ್ನೇ ಮರೆತಿವೆ. ಪ್ರವಾಸಿಗರ ಸಂಖ್ಯೆಯ ಮೇಲೆ ಮಂಗಗಳ ಆಹಾರದ ಲಭ್ಯತೆಯ ಪ್ರಮಾಣ ನಿಂತಿದೆ. ಯಾವಾಗ ಪ್ರವಾಸಿಗರ ಸಂಖ್ಯೆ ಇಳಿಮುಖಗೊಳ್ಳುವುದೋ ಆಗ ಮಂಗಗಳಿಗೆ ಆಹಾರದ ಸಮಸ್ಯೆ ಎದುರಾಗುತ್ತದೆ.

ಈ ಬಾರಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾದ್ದರಿಂದ ಆಹಾರದ ಸಮಸ್ಯೆ ಉಂಟಾಗಿದೆ. ಮುಂದೊಮ್ಮೆ ಇವುಗಳನ್ನು ಹಿಡಿದು ಅರಣ್ಯಕ್ಕೆ ಸ್ಥಳಾಂತರಿಸಿದರೂ ಇವು ಹೆಚ್ಚು ದಿನ ಬದುಕಲಾರವು. ಅಂತಹ ಕೃತಕ ಸನ್ನಿವೇಶವನ್ನು ಮನುಷ್ಯನೇ ಸೃಷ್ಟಿಸಿದ್ದಾನೆ. ಮನುಷ್ಯನ ಸಾಮೀಪ್ಯಕ್ಕೆ ಬರುವ ಪ್ರಾಣಿಗಳು ತೊಂದರೆಗೆ ಸಿಲುಕುತ್ತವೆ ಎಂದು ಪೂರ್ಣಚಂದ್ರ ತೇಜಸ್ವಿಯವರು ಹೇಳಿದ್ದರು. ಆ ಮಾತು ಸತ್ಯವೆನಿಸುತ್ತಿದೆ.

-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.