ADVERTISEMENT

ಅವರು ಮಾಡಿದ್ದೂ ಮೋಜನ್ನೇ...

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 20:15 IST
Last Updated 15 ಜುಲೈ 2019, 20:15 IST

‘ಮುಂಬೈ ಹೋಟೆಲ್‌ಗಳಲ್ಲಿ ಮೋಜು ಮಾಡುತ್ತಿರುವ ಅತೃಪ್ತ ಶಾಸಕರು ಸಾರ್ವಜನಿಕ ಹಿತಾಸಕ್ತಿಯಿಂದ ರಾಜೀನಾಮೆ ನೀಡಿದ್ದಾರೆ ಎಂದುಯಾವ ಮೂರ್ಖ ಹೇಳಲು ಸಾಧ್ಯ?’ ಎಂದು ದಿನೇಶ್ ಅಮಿನ್ ಮಟ್ಟು ತಮ್ಮ ಲೇಖನದಲ್ಲಿ (ಪ್ರ.ವಾ., ಜುಲೈ 15) ಪ್ರಶ್ನಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಳೆದ ವರ್ಷ ಕಾಂಗ್ರೆಸ್ ಸೇರಿದ ಏಳು ಜೆಡಿಎಸ್ ಶಾಸಕರ ರಾಜೀನಾಮೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿತ್ತು ಎಂದು ಯಾವ ಮೂರ್ಖ ಹೇಳಲು ಸಾಧ್ಯವಿತ್ತು? 2017ರಲ್ಲಿ ಗುಜರಾತ್‌ನ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ, ಅಲ್ಲಿನ 44 ಶಾಸಕರನ್ನು ಬೆಂಗಳೂರಿನ ಹೊರವಲಯದ ಐಷಾರಾಮಿ ರೆಸಾರ್ಟ್‌ನಲ್ಲಿ ಇರಿಸಿದ್ದಾಗ ಅವರು ಉಪವಾಸವಿದ್ದರೇ? ಅವರು ಮಾಡಿದ್ದೂ ಮೋಜನ್ನೇ.

ಈಗ ಅತೃಪ್ತ ಶಾಸಕರು ಮುಂಬೈ ಹೋಟೆಲ್‌ಗಳಲ್ಲಿ ಮೋಜು ಮಾಡುತ್ತಿದ್ದಾರೆ ಎಂದಾದರೆ, ಎಲ್ಲ ಪಕ್ಷಗಳ ‘ತೃಪ್ತ ಶಾಸಕರು’ ಬೆಂಗಳೂರು ಮತ್ತು ಸಮೀಪದ ಐಷಾರಾಮಿ ರೆಸಾರ್ಟ್ ಹಾಗೂ ಹೋಟೆಲ್‌ಗಳಲ್ಲಿ ಮಾಡುತ್ತಿರುವುದೇನು? ಅವರು ಅಲ್ಲಿ ತಂಗಿರುವುದು ಸಾರ್ವಜನಿಕ ಹಿತಾಸಕ್ತಿಗಾಗಿ ಎಂದು ಯಾವ ಮೂರ್ಖ ಹೇಳಲು ಸಾಧ್ಯ? ಪಕ್ಷಗಳ ಹಿರಿಯ ನಾಯಕರಿಗೆ ಅವರ ಶಾಸಕರ ಮೇಲಿನ ಅನುಮಾನ ಕಾಡುತ್ತಿರುವುದು, ಶಾಸಕರಿಗೆ ಪಕ್ಷನಿಷ್ಠೆ ಮತ್ತು ಮತದಾರರ ಬಗ್ಗೆ ನಿಷ್ಠೆ ಇಲ್ಲದಿರುವುದು ಹಾಗೂ ಅವರಿಗೆ ತಮ್ಮ ನಾಯಕರಲ್ಲೇ ವಿಶ್ವಾಸ ಇಲ್ಲದಿರುವುದು ಈ ಎಲ್ಲ ಬೆಳವಣಿಗೆಗಳಿಗೆ ಕಾರಣ.

– ಪುಟ್ಟೇಗೌಡ,ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.