ADVERTISEMENT

ನಾಮಪತ್ರ ಸಲ್ಲಿಕೆ: ಆನ್‌ಲೈನ್‌ ವ್ಯವಸ್ಥೆ ಬೇಕು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 4:58 IST
Last Updated 28 ಮಾರ್ಚ್ 2019, 4:58 IST
   

ಉದ್ಯೋಗ ಆಕಾಂಕ್ಷಿಗಳು ಸಂಬಂಧಪಟ್ಟ ಇಲಾಖೆಗೆ ಉದ್ಯೋಗಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವ ಹಾಗೆ, ಚುನಾವಣೆಗೆ ಸ್ಪರ್ಧಿಸಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನಾಮಪತ್ರ ಸಲ್ಲಿಸುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಬೇಕು.

ಈಗಿನ ನಿಯಮಾನುಸಾರ, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ, ಅಭ್ಯರ್ಥಿಯು ಜನಜಾತ್ರೆ ಸೇರಿಸುತ್ತಾರೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಜೊತೆಗೆ, ಪಟಾಕಿ ಹೊಡೆಯುವುದರಿಂದ ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಉಂಟಾಗುತ್ತದೆ. ಜನ ಸೇರಿಸಲು ಅಭ್ಯರ್ಥಿಗಳಿಗೆ ಖರ್ಚೂ ತಗಲುತ್ತದೆ.

ಆನ್‌ಲೈನ್ ವ್ಯವಸ್ಥೆ ಮಾಡುವುದರಿಂದ ಅಭ್ಯರ್ಥಿಯ ಚುನಾವಣಾ ವೆಚ್ಚವನ್ನು ತಗ್ಗಿಸಬಹುದು ಮತ್ತು ಚುನಾವಣಾಧಿಕಾರಿಗಳ ಕಚೇರಿಯ ಸಾರ್ವಜನಿಕ ಕೆಲಸವೂ ಸುಸೂತ್ರವಾಗಿ ನಡೆಯಬಲ್ಲದು. ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜಿಸುವ ಪೊಲೀಸ್ ಇಲಾಖೆಯ ಮಾನವ ಸಂಪನ್ಮೂಲವನ್ನೂ ಉಳಿಸಬಹುದು. ಅಭ್ಯರ್ಥಿಯು ಕಂಪ್ಯೂಟರ್ ಮುಂದೆ ಕುಳಿತು ಹತ್ತು ನಿಮಿಷದಲ್ಲಿ ಅರ್ಜಿ ಸಲ್ಲಿಸಬಹುದು. ಮುಂದಿನ ಸಾರ್ವತ್ರಿಕ ಚುನಾವಣೆಯ ಹೊತ್ತಿಗಾದರೂ ಆಯೋಗವು ಇಂತಹ ವ್ಯವಸ್ಥೆ ಜಾರಿಗೆ ಕಾರ್ಯಪ್ರವೃತ್ತವಾಗಲಿ.

ADVERTISEMENT

ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.