ADVERTISEMENT

ಹಳ್ಳಿಯ ‘ಬೋಲ್ಟ್‌’ಗಳನ್ನು ಗುರುತಿಸಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 20:00 IST
Last Updated 17 ಫೆಬ್ರುವರಿ 2020, 20:00 IST
ಶ್ರೀನಿವಾಸ ಗೌಡ
ಶ್ರೀನಿವಾಸ ಗೌಡ   

ಉಡುಪಿಯ ಐಕಳದಲ್ಲಿ ಇತ್ತೀಚೆಗೆ ನಡೆದ ಕಂಬಳದ ಓಟದಲ್ಲಿ ಶ್ರೀನಿವಾಸ ಗೌಡ ಎಂಬುವರು ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರಿಗಿಂತಲೂ ವೇಗವಾಗಿ ಓಡಿ ಗುರಿ ತಲುಪಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗ್ರಾಮೀಣ ಪ್ರದೇಶ
ಗಳಲ್ಲಿ ಇರುವ ಇಂತಹ ಓಟಗಾರರು ಮತ್ತು ಆಟಗಾರರು ಎಲೆಮರೆಯ ಕಾಯಿಯಂತೆ ತಮ್ಮ ಪಾಡಿಗೆ ತಾವು ಬೆಳೆಯುತ್ತಿರುತ್ತಾರೆ. ಶಾಲಾ- ಕಾಲೇಜುಗಳಲ್ಲಿ ಓದುತ್ತಿರುವವರಿಗೆ ಮುಂದೆ ಬರಲು ಸ್ವಲ್ಪಮಟ್ಟಿಗಾದರೂ ಅವಕಾಶ ಇರುತ್ತದೆ. ಅವಿದ್ಯಾವಂತರಿಗೆ ಅದೂ ಇಲ್ಲ.

ಇನ್ನು ಕ್ರೀಡಾಕೂಟಗಳಿಗೆ ನಡೆಯುವ ಆಯ್ಕೆ ಪ್ರಕ್ರಿಯೆಯ ಕಣ್ಣಾಮುಚ್ಚಾಲೆ ಕೇಳುವುದೇ ಬೇಡ. ಅದು ತರಬೇತುದಾರರ ಕೃಪಾಶೀರ್ವಾದ, ಸಂಘಟಕರ ದಯೆ, ರಾಜಕೀಯ ಶಿಫಾರಸು... ಹೀಗೆ ಹಲವಾರು ಅಡೆತಡೆಗಳನ್ನು ಜಿಗಿದು, ಓಡಿ, ಗುರಿ
ಮುಟ್ಟಬೇಕಾಗುತ್ತದೆ. ಇಂತಹ ಓಟದಲ್ಲಿ ನಿಜವಾದ ಸಾಮರ್ಥ್ಯವುಳ್ಳ ಆಟಗಾರರು ಹಿಂದೆ ಬೀಳುವ ಸಾಧ್ಯತೆ ಹೆಚ್ಚು. ಗ್ರಾಮೀಣ ಪ್ರದೇಶ
ಗಳಲ್ಲಿ ಇಂತಹ ಹತ್ತಾರು ಉಸೇನ್ ಬೋಲ್ಟ್‌ರಿದ್ದಾರೆ. ಅವರ ಸಾಮರ್ಥ್ಯವನ್ನು ತರಬೇತುದಾರರು ಗುರುತಿಸಲಿ ಮತ್ತು ಮುಕ್ತ ಅವಕಾಶ ನೀಡಲಿ.

-ಗಣಪತಿ ನಾಯ್ಕ,ಕಾನಗೋಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.