ADVERTISEMENT

ಅಧಿಕಾರಿಗಳಿಗೆ ಬೇಕು ಸಂವಹನ ತರಬೇತಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಮಾರ್ಚ್ 2021, 19:31 IST
Last Updated 4 ಮಾರ್ಚ್ 2021, 19:31 IST

ಮೆಟ್ರೊ ರೈಲು ಪ್ರಯಾಣಿಕರಿಗೆ ಟೋಕನ್ ವಿತರಿಸಲು ಮುಂದಾಗದ ಬೆಂಗಳೂರು ಮೆಟ್ರೊ ರೈಲು ನಿಗಮದ ವಿರುದ್ಧ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಮಾರ್ಚ್ 4). ಸ್ಮಾರ್ಟ್ ಕಾರ್ಡ್‌ನಲ್ಲಿ ಕನಿಷ್ಠ₹ 50, ಕಾರ್ಡ್ ಖರೀದಿಸಲು ₹ 50, ಪಾರ್ಕಿಂಗ್ ಶುಲ್ಕ ಇತ್ಯಾದಿಗಳಿಂದಾಗಿ ಈಗಾಗಲೇ ದ್ವಿಚಕ್ರ ವಾಹನ ಪ್ರಯಾಣ ದರ ಹಾಗೂ ಮೆಟ್ರೊ ದರ ಎರಡೂ ಸಮನಾದಂತಿವೆ. ರಸ್ತೆಯ ಮೇಲಿನ ಒತ್ತಡ ಕಡಿಮೆ ಮಾಡಬೇಕು, ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ಸುಖಕರ ಪ್ರಯಾಣ ಲಭ್ಯವಾಗಬೇಕು ಎಂಬ ಸದುದ್ದೇಶದಿಂದ ಆರಂಭವಾದ ಮೆಟ್ರೊ ತನ್ನ ಮೂಲ ಉದ್ದೇಶವನ್ನೇ ಮರೆತಂತಿದೆ.

ಟೋಕನ್ ಅವ್ಯವಸ್ಥೆಯ ಕುರಿತು ಮೆಟ್ರೊ ಅಧಿಕಾರಿಗಳು ತಾವೇ ಮುಂದೆ ಬಂದು ಸ್ಪಷ್ಟನೆ ನೀಡಬೇಕು. ತಾವು ಜನಸೇವಕರು ಎಂಬುದನ್ನು ಕೆಲವು ಅಧಿಕಾರಿಗಳು ಮರೆತುಬಿಡುತ್ತಾರೆ. ಸರ್ಕಾರ ಇಂತಹ ಅಧಿಕಾರಿಗಳಿಗೆ ಈ ಕೂಡಲೇ ಸಂವಹನ ತರಬೇತಿ ನೀಡುವುದು ಒಳಿತು.

- ಸುಘೋಷ ಸ. ನಿಗಳೆ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.