ADVERTISEMENT

ವಾಚಕರ ವಾಣಿ: ನಮ್ಮ ಅಭಿವೃದ್ಧಿ ನಮ್ಮ ಕೈಯಲ್ಲಿ...

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 19:30 IST
Last Updated 10 ನವೆಂಬರ್ 2022, 19:30 IST

‘ಜಾತಿ: ಏಕೆ ಇಂದಿಗೂ ಜೀವಂತ?’ ಎಂಬ ಲೇಖನದಲ್ಲಿ (ಪ್ರ.ವಾ., ನ. 4) ಅರುಣ್‌ ಸಿನ್ಹಾ ಅವರು ಮಾಡಿರುವ ವಿಶ್ಲೇಷಣೆ ಅಭಿನಂದನಾರ್ಹವಾಗಿದೆ. ನಮ್ಮ ಸಂವಿಧಾನದ ಆಶಯಗಳನ್ನು ಕಾರ್ಯರೂಪಕ್ಕೆ ತರಲು ಸರ್ಕಾರಗಳು ವಿಫಲವಾಗಿರುವುದೇ ಜಾತಿ ಪದ್ಧತಿ ಜೀವಂತವಾಗಿರಲು ಮುಖ್ಯ ಕಾರಣ. ಜನಪ್ರತಿನಿಧಿಗಳು ತಮ್ಮ ತಮ್ಮ ಜಾತಿಯ ಹೆಸರು ಬಳಸಿ ಬಲ ಪ್ರದರ್ಶನ ಮಾಡುವುದು ಸಾಮಾನ್ಯವಾಗಿದೆ.

ಜಾತಿ ಎನ್ನುವುದು ಒಂದು ಕಾಲ್ಪನಿಕ ಪದ. ಇದು ಜೀವಂತವಾಗಿ ಇರಲಿ ಅಥವಾ ಇಲ್ಲದಿರಲಿ ಯಾರಿಗೂ ನಷ್ಟವಿಲ್ಲ. ಜಾತಿ ನಿಂದನೆಗೆ ಒಳಗಾಗುವವರು ಮೊದಲು ಸ್ವಾಭಿಮಾನಿಗಳಾಗಲು, ಜ್ಞಾನಿಗಳಾಗಲು, ಸಂಸ್ಕಾರವಂತರಾ ಗಲು, ಆರ್ಥಿಕವಾಗಿ ಸಶಕ್ತರಾಗಲು ಶ್ರಮ ಪಡಬೇಕು. ಸೂಕ್ತ ವ್ಯಕ್ತಿಗಳ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು. ಸಂವಿಧಾನದ ಅರಿವಿರಬೇಕು. ಮೂಢನಂಬಿಕೆ ತ್ಯಜಿಸಿ, ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ನಮ್ಮ ಅಭಿವೃದ್ಧಿ ನಮ್ಮ ಕೈಯಲ್ಲಿದೆ ಎಂಬುದನ್ನು ಮರೆಯಬಾರದು.

–ಡಾ. ಎಸ್.ಡಿ.ರಂಗಸ್ವಾಮಿ, ಹಾಸನ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.