ADVERTISEMENT

ಸಾಂಘಿಕ ಹೋರಾಟದ ಗೆಲುವು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಸೆಪ್ಟೆಂಬರ್ 2022, 19:30 IST
Last Updated 13 ಸೆಪ್ಟೆಂಬರ್ 2022, 19:30 IST

ಶ್ರೀಲಂಕಾ ಕ್ರಿಕೆಟ್ ತಂಡವು ಪಾಕಿಸ್ತಾನವನ್ನು ಮಣಿಸಿ ಏಷ್ಯಾ ಕಪ್– 2022 ಮುಡಿಗೇರಿಸಿಕೊಂಡಿದೆ. ಆ ದೇಶವು ಅರಾಜಕತೆಯಿಂದ ನರಳುತ್ತಿರುವ ಸಂದರ್ಭದಲ್ಲಿ ಇಂಥದ್ದೊಂದು ಗೆಲುವು ಅಲ್ಲಿನ ನಾಗರಿಕರಿಗೆ
ಅನಿವಾರ್ಯವಾಗಿತ್ತು, ಖುಷಿಪಡಲು. ಮುಂದಿನ ದಿನಗಳಲ್ಲಿ ಅರಾಜಕತೆ ಹೋಗಿ ಅಲ್ಲಿನ ಜನಸಾಮಾನ್ಯರು ಸಹಜಜೀವನ ನಡೆಸುವಂತಾಗಲಿ. ಇಲ್ಲಿ ಗಮನಿಸಬೇಕಾದದ್ದು, ಅಲ್ಪ ಮೊತ್ತದ ಗುರಿ ಇದ್ದೂ ಎದುರಾಳಿಗಳು ತಲೆ ಎತ್ತದಂತೆ ಮಾಡಿದ ನಾಯಕನ ಜಾಣ್ಮೆಯ ನಡೆ. ಎಲ್ಲಾ ಆಟಗಾರರ ಸಾಂಘಿಕ ಹೋರಾಟದ ಫಲ ಪ್ರಶಸ್ತಿ ಮುಡಿಗೇರುವಂತೆ ಮಾಡಿದೆ. ಮುಂಬರುವ ವಿಶ್ವಕಪ್ ಟಿ-20 ಟೂರ್ನಿಯಲ್ಲಿ ನಮ್ಮ ತಂಡವೂ ಲಂಕನ್ನರ ಸಾಂಘಿಕ ಹೋರಾಟವನ್ನು ಗಮನಿಸಿ, ಸಕಾರಾತ್ಮಕತೆ ಅಳವಡಿಸಿಕೊಂಡು ಟೂರ್ನಿ ಗೆಲ್ಲಲು ಪ್ರಯತ್ನಿಸಲಿ.

- ನಿಖಿತಾ ಶಶಾಂಕ್ ಭಟ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT