ADVERTISEMENT

ವಾಚಕರ ವಾಣಿ: ರಸಗೊಬ್ಬರ ಸಕಾಲದಲ್ಲಿ ಪೂರೈಕೆಯಾಗಲಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 22:00 IST
Last Updated 3 ನವೆಂಬರ್ 2021, 22:00 IST

ಮುಂಗಾರು ಮುಗಿದು ಹಿಂಗಾರು ಶುರುವಾಗಿದೆ. ಸರ್ಕಾರದ ರಸಗೊಬ್ಬರ ಪೂರೈಕೆಯ ನಿಧಾನಗತಿಯನ್ನು ಸಹಿಸಲಾಗದು. ರಸಗೊಬ್ಬರವನ್ನು ಸೂಕ್ತ ಸಮಯದಲ್ಲಿ ರೈತರಿಗೆ ತಲುಪಿಸದೇ ಇರುವುದು ಪೂರೈಕೆ ಸರಪಳಿಯ ಅಸಮರ್ಪಕ ನಿರ್ವಹಣೆಯನ್ನು ಎತ್ತಿತೋರಿಸುತ್ತದಲ್ಲದೆ ಸರ್ಕಾರದ ಪೂರ್ವಯೋಜನಾ ಕ್ರಮಗಳು ಪ್ರಶ್ನಾರ್ಹವಾಗಿವೆ.

ಗಾಯದ ಮೇಲೆ ಬರೆ ಎಳೆದಂತೆ ಹವಾಮಾನ ವೈಪರೀತ್ಯದಿಂದಾಗಿ ಮುಂಗಾರಿನ ಆಗಮನ ಮತ್ತು ನಿರ್ಗಮನವು ಏರುಪೇರಾಗಿ ರೈತನನ್ನು ಇನ್ನಷ್ಟು ಸಂಕಷ್ಟಕ್ಕೀಡುಮಾಡಿದೆ. ಸರ್ಕಾರವು ಕಾರ್ಯಪ್ರವೃತ್ತವಾಗಿ, ತುರ್ತಾಗಿ ರಸಗೊಬ್ಬರ ಪೂರೈಸಬೇಕು. ಇಲ್ಲದಿದ್ದರೆ ಪ್ರತಿಕೂಲ ಪರಿಣಾಮ ಉಂಟಾಗಿ, ಸೂಕ್ತ ಸಮಯದಲ್ಲಿ ಬೆಳೆ ಬಾರದೆ ಹಣದುಬ್ಬರ ಹೆಚ್ಚಾಗಿ ರೈತ, ಗ್ರಾಹಕ ಮತ್ತು ದೇಶದ ಆರ್ಥಿಕತೆಯು ಮತ್ತಷ್ಟು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ರೈತರ ಹಿತ ಸಮಸ್ತ ನಾಡಿನ ಹಿತ ಎನ್ನುವುದನ್ನು ಸರ್ಕಾರ ಮರೆಯಬಾರದು.

ಸುನಿಲ್ ರಾಜ್ ಪಿ.ಎಂ.,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.