ADVERTISEMENT

ಅಂಗವಿಕಲರಿಗೆ ರಿಯಾಯಿತಿ ಬಸ್‌ಪಾಸ್‌: ಅನಗತ್ಯ ಗೋಜಲು ಏಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 30 ಆಗಸ್ಟ್ 2020, 19:45 IST
Last Updated 30 ಆಗಸ್ಟ್ 2020, 19:45 IST

ಅಂಗವಿಕಲರು ರಿಯಾಯಿತಿ ದರದ ಬಸ್‍ಪಾಸ್ ಪಡೆಯಲು, ತಾವು ಸರ್ಕಾರಿ ಅಥವಾ ಅರೆಸರ್ಕಾರಿ ನೌಕರರಲ್ಲ ಎಂಬ ಬಗ್ಗೆ ಪ್ರತೀ ವರ್ಷ ಪ್ರಮಾಣಪತ್ರ ನೀಡಬೇಕಾಗುತ್ತದೆ. ಈ ಅಭ್ಯರ್ಥಿಗಳು ಸರ್ಕಾರಿ ಅಥವಾ ಅರೆಸರ್ಕಾರಿ ನೌಕರಿಗೆ ಸೇರಲು ವಯಸ್ಸು ಮೀರಿ ಅನರ್ಹರಾಗಿದ್ದರೂ ಪ್ರಮಾಣಪತ್ರವನ್ನು ನೀಡಬೇಕಾಗಿರುವುದರಿಂದ, ಇದು ಆರ್ಥಿಕವಾಗಿ ಹೊರೆಯಾಗಿ (ಸ್ಟ್ಯಾಂಪ್ ಪೇಪರ್, ಟೈಪಿಂಗ್, ನೋಟರಿ ಶುಲ್ಕ...) ಪರಿಣಮಿಸಿದೆ.

ಹೀಗಾಗಿ ಸರ್ಕಾರಿ, ಅರೆಸರ್ಕಾರಿ ನೌಕರಿಗೆ ಸೇರುವ ವಯಸ್ಸು ಮೀರಿದವರಿಗೆ ಇಂತಹ ಪ್ರಮಾಣಪತ್ರ ಸಲ್ಲಿಕೆಯಿಂದ ಸರ್ಕಾರ ವಿನಾಯಿತಿ ನೀಡಬೇಕು. ಇಲ್ಲವೇ ಪ್ರತೀವರ್ಷ ಬಸ್‌ಪಾಸ್ ನವೀಕರಿಸುವ ಬದಲು, ಶೇಕಡಾವಾರು ಪ್ರಮಾಣದಲ್ಲಿ ಪ್ರಯಾಣ ದರದಲ್ಲಿ ರಿಯಾಯಿತಿ ದರ ನಿಗದಿಪಡಿಸಿ, ಈಗಿರುವ 100 ಕಿ.ಮೀ. ವ್ಯಾಪ್ತಿಯ ಬದಲಾಗಿ, ರಾಜ್ಯದಾದ್ಯಂತ ಪ್ರಯಾಣಿಸಲು ಅವಕಾಶ ಮಾಡಿಕೊಡಬೇಕು.

ಮಧುಸೂದನ ಕೆ., ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.