ADVERTISEMENT

ಸಂವಾದಕ್ಕೆ ಮುಂದಾಗಲಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 17:08 IST
Last Updated 3 ಜನವರಿ 2019, 17:08 IST

ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಟಿಕೆಟ್‌ಗಾಗಿ ಒತ್ತಡ, ಬೆದರಿಕೆ. ವಿಧಾನಸಭೆಗೆ ಆಯ್ಕೆಯಾದ ಬಳಿಕ ಮಂತ್ರಿಪದವಿಗಾಗಿ ಒತ್ತಡ, ಮಂತ್ರಿ ಪದವಿ ಕೊಡದಿದ್ದರೆ ಪಕ್ಷ ಬಿಡುವ ಬೆದರಿಕೆ. ಮಂತ್ರಿಪದವಿ ಗಿಟ್ಟಿಸಿಕೊಂಡ ಮೇಲೆ ತಾವು ಕೇಳಿದ ಖಾತೆಯೇ ಬೇಕೆಂಬ ಒತ್ತಡ, ಅದು ನೀಡದಿದ್ದರೆ ರಾಜೀನಾಮೆಯ ಬೆದರಿಕೆ...

ಕರ್ನಾಟಕದ ವಿಧಾನಸಭೆಯ ಚುನಾವಣೆ ಘೋಷಣೆಯಾದಂದಿನಿಂದ ಇಂದಿನವರೆಗೆ ಇವೇ ಸುದ್ದಿಗಳನ್ನು ಓದುತ್ತಾ ಇದ್ದೇವೆ. ಚುನಾಯಿತ ಪ್ರತಿನಿಧಿಗಳ ಆದ್ಯತೆ ಏನು ಎಂದು ಕೇಳುವ ಹಕ್ಕು ಮತದಾರರಿಗೆ ಇದೆಯೇ? ತಾವು ಆರಿಸಿಬಂದ ಕ್ಷೇತ್ರದ ಮತದಾರರೊಂದಿಗೆ ಕೆಲವೊಂದು ಕಡೆ ಮುಕ್ತ ಸಂವಾದಕ್ಕೆ ನಮ್ಮ ಪ್ರತಿನಿಧಿಗಳು ಯಾಕೆ ಮುಂದಾಗಬಾರದು?

ಟಿ.ಆರ್.ಭಟ್, ಮಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.