
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಬಹುತೇಕ ಹಳ್ಳಿಗಳ ಸುತ್ತಲಿನ ಪರಿಸರದಲ್ಲಿ ರಾಷ್ಟ್ರಪಕ್ಷಿ ನವಿಲಿನ ಸಂಕುಲ ವೃದ್ಧಿಯಾಗಿದೆ. ಆದರೆ ಅವುಗಳಿಗೆ ಸೂಕ್ತವಾದ ರಕ್ಷಣೆ ಮಾತ್ರ ಗಗನಕುಸುಮವಾಗಿದೆ. ಐತಿಹಾಸಿಕ ಸ್ಥಳ ಕಸಬಾ ಲಿಂಗಸುಗೂರು, ಗುರುಗುಂಟೆ ಅಮರೇಶ್ವರ, ಕರಡಕಲ್ಲು... ಹೀಗೆ ಹಲವು ಹಳ್ಳಿಗಳ ಹೊಲಗಳಲ್ಲಿ ಯಥೇಚ್ಛವಾಗಿ ಹಾರಾಡುತ್ತಾ ಸಾಗುವ ಈ ಪಕ್ಷಿಗಳು ಕೆಲವು ಬಾರಿ ಮನುಷ್ಯರು ಹಾಗೂ ಪ್ರಾಣಿಗಳ ಕೈಗೆ ಸಿಲುಕಿ ನಾಶವಾಗುತ್ತಿವೆ. ಹಾಗಾಗಿ ಸರ್ಕಾರ ಈ ಭಾಗದಲ್ಲಿನ ನವಿಲುಗಳ ಸಂರಕ್ಷಣೆಗಾಗಿ ನವಿಲುಧಾಮವನ್ನು ನಿರ್ಮಿಸಬೇಕು.
– ಡಾ. ಶಿವರಾಜ ಯತಗಲ್, ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.