ADVERTISEMENT

ಜನರ ಮನೋಧರ್ಮ ಬದಲಾಗಬೇಕು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 20:00 IST
Last Updated 8 ಮಾರ್ಚ್ 2020, 20:00 IST

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಗಟಗಲ್‌ನ ದಲಿತ ಕೇರಿಯಲ್ಲಿ ವ್ಯಕ್ತಿಯೊಬ್ಬರು ನಿಧನರಾಗಿದ್ದಕ್ಕೆ, ಮೇಲ್ಜಾತಿಯವರು ಕಿರಾಣಿ ಅಂಗಡಿ ಮತ್ತು ಹೋಟೆಲ್‍ಗಳನ್ನು ಬಂದ್ ಮಾಡಿ ಅಸಹಕಾರ ತೋರಿಸಿರುವುದನ್ನು ತಿಳಿದು (ಪ್ರ.ವಾ., ಮಾರ್ಚ್‌ 7) ಮನಸ್ಸಿಗೆ ತುಂಬಾ ನೋವಾಯಿತು.

ಇಂದಿಗೂ ನಮ್ಮ ಸಮಾಜದಲ್ಲಿ ದಲಿತರು ಶೋಷಣೆಗೆ ಒಳಗಾಗುತ್ತಿರುವುದು ಶೋಚನೀಯ. ದಲಿತರಿಗೆ ಕಾನೂನುಗಳಷ್ಟೇ ಸಮಾನತೆ ತಂದುಕೊಡಲಾರವು. ಜನರ ಮನೋಧರ್ಮ ಬದಲಾಗಬೇಕು. ಮನಃಪರಿವರ್ತನೆ ಕೆಲಸ ನಿರಂತರವಾಗಿ ನಡೆಯಬೇಕು. ಆಗಮಾತ್ರ ‘ಮಾನವ ಜಾತಿ ತಾನೊಂದೆ ವಲಂ’ ಎಂಬ ಪಂಪನ ಮಾತು ಕಾರ್ಯರೂಪಕ್ಕೆ ಬರಲು ಸಾಧ್ಯ.

–ನರಸಿಂಹಮೂರ್ತಿ ಟಿ.ಆರ್.,ತೊಂದೋಟಿ, ಮಧುಗಿರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.