ADVERTISEMENT

ಮಂತ್ರಿಯಾದರೂ ಮುಟ್ಟಿಸಿಕೊಳ್ಳುವುದಿಲ್ಲ!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 16:51 IST
Last Updated 21 ಸೆಪ್ಟೆಂಬರ್ 2022, 16:51 IST

ನಮ್ಮ ಶಾಸಕ ಅಥವಾ ಮಂತ್ರಿಯೊಬ್ಬರಿಗೆ ಟೀ ಕುಡಿಯಲು ಕೊಡುವ ಸ್ಟೀಲ್‌ಲೋಟ ಎಷ್ಟೋ ಸಂದರ್ಭ ಗಳಲ್ಲಿ ಮತ್ತೆ ಮನೆ ಸೇರುವುದಿಲ್ಲ. ಶಾಸಕ ಅಥವಾ ಮಂತ್ರಿ ಹೊರಟ ನಂತರ, ಲೋಟವನ್ನು ಹೊರಕ್ಕೆ ಬಿಸಾಡಲಾಗುತ್ತದೆ. ಪೇಪರ್ ಲೋಟ ಕೊಡುವ ಪದ್ಧತಿಯೂ ಇದೆ. ಆದರೆ ಶಾಸಕರಿಗೆ ಮರ್ಯಾದೆ ತೋರಿಸಲೋಸುಗ ಸ್ಟೀಲ್‌ಗ್ಲಾಸ್‌ನಲ್ಲಿ ನೀಡಲಾಗುತ್ತದೆ. ಮೀಸಲು ಕ್ಷೇತ್ರಗಳ ಅನೇಕ ಶಾಸಕರನ್ನು ನಮ್ಮ ಜನ ನಡೆಸಿಕೊಳ್ಳುವುದೇ ಹೀಗೆ. ಕಡಿದಾಕಿದರೆ ವಾಸಿಯಾಗುವ ಕ್ಯಾನ್ಸರ್‌ಗಿಂತ ಜಾತಿಯ ಒಲವು ನಮ್ಮನ್ನು ಹಿಂಸಿಸುತ್ತಿಲ್ಲವೇ?

ದಲಿತನೊಬ್ಬ ಮಂತ್ರಿಗಿರಿಗೇರಿದರೂ ಅಸ್ಪೃಶ್ಯನಾಗೇ ಉಳಿದುಕೊಳ್ಳುತ್ತಾನೆ. ಈ ಸತ್ಯ ತಿಳಿದು ದಲಿತ ಜನಪ್ರತಿನಿಧಿಯು ಪ್ರಬಲ ಜಾತಿಯವರ ಮನೆಯ ಒಳಗೆ ಹೋಗುವುದಿಲ್ಲ. ಬದಲಾಗಿ, ‘ಇಲ್ಲೇ ಗಾಳಿ ಚೆನ್ನಾಗದೆ’ ಎಂದು ಜಗುಲಿಯಲ್ಲಿ ಕುಳಿತುಕೊಳ್ಳುತ್ತಾನೆ. ಹಾಗೊಮ್ಮೆ ಒಳಹೋದರೆ, ಅವ ಅಹಂಕಾರಿ ಎಂದು ಬಿಂಬಿತ ನಾಗುತ್ತಾನೆ. ತಮಿಳುನಾಡಿನ ಒಬ್ಬ ಬಾಲಕನಿಗೆ ಮಿಠಾಯಿ ನೀಡಲು ಅಂಗಡಿಯಾತ ನಿರಾಕರಿಸುವುದು ನಮ್ಮ ಮನಕಲಕುವುದಾದರೆ, ನಮ್ಮ ಜನಪ್ರತಿನಿಧಿಗಳನ್ನು ಜಾತಿಯ ಕಾರಣಕ್ಕೆ ನಾವು ಅವಮಾನಿಸುವ ರೀತಿಗೆ ತಲೆತಗ್ಗಿಸಿದರಷ್ಟೇ ಸಾಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT