ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದು ಸರಿಯಲ್ಲ. ಈ ಕಾರ್ಯ ಒಮ್ಮೆ ಪ್ರಾರಂಭವಾಯಿತೆಂದರೆ, ಕೊರೊನಾ ಹಿನ್ನೆಲೆಯಲ್ಲಿ ಬಹಳಷ್ಟು ಸಮಸ್ಯೆಗಳು ಶುರುವಾಗುತ್ತವೆ.
ಚಿತ್ರೀಕರಣಕ್ಕೆ ನಟ–ನಟಿಯರನ್ನು ಕರೆತರುವ ವಾಹನದಲ್ಲಿ ಹಾಗೂ ಚಿತ್ರೀಕರಣದ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ. ನಟ-ನಟಿಯರಾಗಲೀ, ಪದೇಪದೇ ಸೂಚನೆಗಳನ್ನು ನೀಡುತ್ತಿರಬೇಕಾದ ನಿರ್ದೇಶನದ ತಂಡವಾಗಲೀ ಮಾಸ್ಕ್ ಧರಿಸಲಾಗದು.
ಕೇಟರಿಂಗ್ ಮೂಲಕ ತರಿಸುವ ಊಟ, ತಿಂಡಿಯ ಸುರಕ್ಷೆ ಬಗ್ಗೆ ಖಾತರಿ ಇರುವುದಿಲ್ಲ. ಮೇಲಾಗಿ ಚಿತ್ರೀಕರಣ ತಂಡದ ಬಹಳಷ್ಟು ತಾಂತ್ರಿಕ ಸಹಾಯಕರು ಹಳ್ಳಿಗಳಿಂದ ಬಂದು ಬೆಂಗಳೂರಿನಲ್ಲಿ ಬದುಕು ಕಂಡುಕೊಂಡಿದ್ದವರು.
ಈಗಿನ ಲಾಕ್‍ಡೌನ್ ಸ್ಥಿತಿಯಲ್ಲಿ ಅವರು ಊರುಗಳಿಂದ ಬೆಂಗಳೂರಿಗೆ ಬರಲಾಗುತ್ತಿಲ್ಲ. ಹೀಗಾಗಿ ಪರ್ಯಾಯ ಕಾರ್ಮಿಕರನ್ನು, ತಂತ್ರಜ್ಞರನ್ನು ಚಿತ್ರೀಕರಣಕ್ಕೆ ನೇಮಿಸಿಕೊಂಡರೆ, ತಮ್ಮದಲ್ಲದ ತಪ್ಪಿಗಾಗಿ ಈ ಬಡಪಾಯಿಗಳ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬೀಳುತ್ತದೆ. ಕೊನೇಪಕ್ಷ ಈ ತಿಂಗಳ ಕೊನೆಯವರೆಗಾದರೂ ಇವುಗಳ ಚಿತ್ರೀಕರಣ ಸ್ಥಗಿತ
ಗೊಳಿಸುವುದು ಒಳ್ಳೆಯದು.
-ಎಸ್.ಯತೀಶ್ ಕುಮಾರ್,ಸಾಸಲುಕೊಪ್ಪ, ನಾಗಮಂಗಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.