ADVERTISEMENT

ಸರ್ಕಾರದ ಸವಲತ್ತು ಯಾರಿಗಾಗಿ?

​ಪ್ರಜಾವಾಣಿ ವಾರ್ತೆ
Published 6 ಮೇ 2020, 19:45 IST
Last Updated 6 ಮೇ 2020, 19:45 IST

‘ಒಂದೂವರೆ ತಿಂಗಳಾಯಿತು, ಒಂದು ಹೊತ್ತು ಊಟ. ಎಂಟ್ ತಿಂಗಳ ಕೂಸಿಗೆ ಉಣಸಾಕೂ ಎದ್ಯಾಗ ಹಾಲಿಲ್ಲ. ಅಂಗಡಿಯಿಂದ ಹಾಲು, ಬ್ರೆಡ್, ಔಷದ ತಂದೇನಂದ್ರ ಕೈಯಾಗ ರೊಕ್ಕ ಇಲ್ಲ’.

‘ಊರಿಂದ ತಂದಿದ್ದ ದವಸ- ಧಾನ್ಯ ಖಾಲಿಯಾತು, ದುಡಿದಿದ್ದ ಹಣವೆಲ್ಲಾ ಊಟಕ್ಕೆ ಆಯಿತು. ದಿನಕ್ಕೆ ಒಮ್ಮೆ ಮಾತ್ರ ಊಟ ಸಿಗುತ್ತಿತ್ತು’– ಇವು ಯಾವುದೇ ಸಿನಿಮಾ ಅಥವಾ ನಾಟಕದ ಡೈಲಾಗ್‌ಗಳಲ್ಲ. ತುತ್ತಿನಚೀಲ ತುಂಬಿಸಿಕೊಳ್ಳಲು ಹಳ್ಳಿಯಿಂದ ನಗರಕ್ಕೆ ಬಂದ ನಮ್ಮ ಗ್ರಾಮೀಣ ತಾಯಂದಿರ ಮಾತುಗಳು. ಇವುಗಳನ್ನು ಕೇಳಿದಾಗ ಒಂದು ಕ್ಷಣ ಜೀವವೇ ಹೋದಂತಾಯಿತು.

ಹಸಿವು ಮತ್ತು ಬಡತನ ಕಲಿಸುವಷ್ಟು ಪಾಠವನ್ನು ಜಗತ್ತಿನ ಯಾವುದೇ ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ ಎಂಬ ಮಾತು ನೆನಪಾಯಿತು. ಹಾಗಿದ್ದರೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಯಾರ ಅನುಕೂಲಕ್ಕಾಗಿ ಇರುತ್ತವೆ? ರೋಮಿಲಾ ಥಾಪರ್ ಅವರು ಹೇಳುವಂತೆ ‘ರಾವಣ ಅಪಹರಿಸಿಕೊಂಡು ಹೋದದ್ದು ಸೀತೆಯ ನೆರಳನ್ನೇ ಹೊರತು ಸೀತೆಯನ್ನಲ್ಲ, ಅದು ಮಾಯಾರೂಪ’.

ADVERTISEMENT

ಅದರಂತೆ, ಸರ್ಕಾರದ ಸಕಲ ಸವಲತ್ತುಗಳನ್ನೂ ಬಳಸುವವರು ಬಡವರ೦ತೆ ಇರುವ ಶ್ರೀಮಂತ ನೆರಳಿನ ಜನರೇ?

-ರಾಮಪ್ಪ ವೈ.ಜಿ.,ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.