ADVERTISEMENT

ಬ್ಯಾಗ್ ಹೊರೆ ಇಳಿಕೆ ಸ್ವಾಗತಾರ್ಹ

​ಪ್ರಜಾವಾಣಿ ವಾರ್ತೆ
Published 7 ಮೇ 2019, 18:45 IST
Last Updated 7 ಮೇ 2019, 18:45 IST

ಶಾಲಾ ಮಕ್ಕಳ ಬ್ಯಾಗ್‌ನ ಭಾರಕ್ಕೆ ಮಿತಿ ಹೇರಬೇಕೆಂಬ ಬೇಡಿಕೆಗೆ ಹಲವಾರು ವರ್ಷಗಳ ಇತಿಹಾಸವಿದೆ. ಅನೇಕ ಶಾಲಾ ಮಕ್ಕಳಿಗೆ ಬ್ಯಾಗ್ ಹೊರಲಾರದ ಹೊರೆಯಾಗಿದೆ. ಕೆಲವು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಬ್ಯಾಗ್ ಹೊರುವ ರೀತಿ ನೋಡಿದರೆ, ಇವರೇನು ಶಾಲೆಗೆ ಹೋಗುತ್ತಾರೋ ಅಥವಾ ಚಾರಣಕ್ಕೆ ಹೋಗುತ್ತಾರೋ ಎಂಬ ಅನುಮಾನ ಕಾಡದಿರದು. ಕೆಲವು ಮಕ್ಕಳಂತೂ ಶಾಲಾ ಪುಸ್ತಕಗಳನ್ನು ಆಟೊದಲ್ಲಿ ಕಳುಹಿಸಿ ತಾವು ಸೈಕಲ್‌ನಲ್ಲಿ ಸ್ಕೂಲಿಗೆ ಹೋಗುವುದೂ ಇದೆ!

ಶಾಲಾ ಬ್ಯಾಗ್ ಈ ರೀತಿ ಮಕ್ಕಳ ಪಾಲಿಗೆ ನಿರಂತರ ಕಿರಿಕಿರಿಯಾಗಿದೆ. ಇದೀಗ ಶಾಲಾ ಬ್ಯಾಗ್‌ ತೂಕ ಕಡಿಮೆ ಮಾಡಲು ಸರ್ಕಾರ ನಿಯಮವೊಂದನ್ನು ಜಾರಿಗೆ ತಂದಿರುವುದುಸ್ವಾಗತಾರ್ಹ. ಈ ನಿಯಮವನ್ನು ಕರಾರುವಾಕ್ಕಾಗಿ ಜಾರಿಗೆ ತರಲು ಕಷ್ಟ ಎನಿಸಿದರೂ ಮಕ್ಕಳ ದೃಷ್ಟಿಯಿಂದ ಇದೊಂದು ಉತ್ತಮ ಹಾಗೂ ಸಕಾಲಿಕ ನಿರ್ಧಾರವಾಗಿದೆ.
–ಕೆ.ವಿ.ವಾಸು,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT