
ಪ್ರಜಾವಾಣಿ ವಾರ್ತೆ
ಮಲೆನಾಡು ಭಾಗದಲ್ಲಿ ಮಂಗಗಳ ಮಿತಿಮೀರಿದ ಹಾವಳಿಯನ್ನು ಮುಂದಿಟ್ಟುಕೊಂಡು, ಒಂದು ಪಾರ್ಕ್ ನಿರ್ಮಿಸಿ ಅವುಗಳನ್ನು ಅಲ್ಲಿಟ್ಟು ಸಾಕಲು ಮುಂದಾಗಿದೆ ಸರ್ಕಾರ. ಆದರೆ, ಮರದಿಂದ ಮರಕ್ಕೆ ಹಾರುವ ಈ ವಾನರನನ್ನು ಹೀಗೆ ಒಂದೆಡೆ ಕೂಡಿಹಾಕುವುದು ಸುಲಭದ ಮಾತೇ?
ದಿನನಿತ್ಯ ಆಹಾರಕ್ಕಾಗಿ ಕಾಡಿನಲ್ಲಿ ಮೈಲಿಗಟ್ಟಲೆ ಆಲೆದಾಡುವ ವಾನರನನ್ನು ಒಂದೆಡೆ ಕೂಡಿಹಾಕಿದರೆ, ಅದರ ಪರಿಣಾಮ ಊಹಿಸಲು ಅಸಾಧ್ಯ. ನಾಡು ಮಾಡಲು ಕಾಡು ಕಡಿಮೆ ಮಾಡಿದ ನಾವು, ಇಂದು ಮಂಗಗಳ ಮನೆಯನ್ನು ಆಕ್ರಮಿಸಿಕೊಂಡಿದ್ದೇವೆ. ಅವು ಮತ್ತೆಲ್ಲಿ ಬದುಕಲು ಸಾಧ್ಯ?
-ಗಣಪತಿ ನಾಯ್ಕ, ಕಾನಗೋಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.