ADVERTISEMENT

ವಾಚಕರ ವಾಣಿ | ನಿರುದ್ಯೋಗ ಸಮಸ್ಯೆಯೂ ಪಠ್ಯದಲ್ಲಿ ಇರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಜೂನ್ 2022, 20:00 IST
Last Updated 16 ಜೂನ್ 2022, 20:00 IST

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಪುನರ್‌ಪರಿಷ್ಕರಿಸಿದ ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯ ಭಾಗ– 1ರಲ್ಲಿ ‘ಭಾರತಕ್ಕಿರುವ ಸವಾಲುಗಳು ಹಾಗೂ ಅವುಗಳ ಪರಿಹಾರೋಪಾಯಗಳು’ ಅಧ್ಯಾಯದಲ್ಲಿ, ನಿರುದ್ಯೋಗ ವಿಷಯವನ್ನು ತೆಗೆದಿರುವುದು ಸೂಕ್ತವಲ್ಲ. ‘ಪ್ರಾದೇಶಿಕವಾದವೂ ಒಂದು ಸಮಸ್ಯೆ’ ಎಂದು ಹೇಳಿರುವ ಈ ಸಮಿತಿ, ನಿರುದ್ಯೋಗ ಕೂಡ ದೇಶದ ಒಂದು ಜ್ವಲಂತ ಸಮಸ್ಯೆ ಎಂಬುದನ್ನು ತಿಳಿಯಬೇಕಿದೆ. ಎಲ್ಲ ಪ್ರದೇಶಗಳಲ್ಲಿಯೂ ನಿರುದ್ಯೋಗದ ಸಮಸ್ಯೆ ಇದೆ. ಅದು ಜನರನ್ನು ಬಡತನ, ಭ್ರಷ್ಟಾಚಾರ ಮತ್ತು ಹಲವು ಕಾನೂನುಬಾಹಿರ ಚಟುವಟಿಕೆಗಳಿಗೆ ತಳ್ಳುತ್ತದೆ.

ಪಠ್ಯಪುಸ್ತಕಗಳು ಈಗಿನಿಂದಲೇ ವಿದ್ಯಾರ್ಥಿಗಳಲ್ಲಿ ನಿರುದ್ಯೋಗದ ಕಾರಣಗಳು, ಅದರಿಂದ ಆಗುವ ಪರಿಣಾಮಗಳು ಮತ್ತು ನಿರುದ್ಯೋಗವನ್ನು ನಿವಾರಿಸುವಲ್ಲಿ ಸರ್ಕಾರ ತೆಗೆದುಕೊಂಡ ಕಾರ್ಯಕ್ರಮಗಳು, ನಿರುದ್ಯೋಗ ನಿವಾರಣೆಗೆ ಶಿಕ್ಷಣದ ಮಹತ್ವವನ್ನು ತಿಳಿಸಬೇಕಿದೆ. ಜ್ಞಾನ, ಕೌಶಲ, ಮಾನವೀಯ ಮೌಲ್ಯಗಳನ್ನು ನೀಡುವ ಶಿಕ್ಷಣವು ಮುಂದೆ ಉದ್ಯೋಗವನ್ನು ಕೊಡುತ್ತದೆ. ಪಠ್ಯಪುಸ್ತಕಗಳ ಪುನರ್‌ಪರಿಷ್ಕರಣೆಯು ದೇಶಾಭಿಮಾನ ಬೆಳೆಸುವುದರ ಜೊತೆಗೆ ಜ್ವಲಂತ ಸಮಸ್ಯೆಗಳತ್ತ ಕೂಡ ಬೆಳಕು ಚೆಲ್ಲಬೇಕಾಗಿದೆ.

-ನಿರ್ಮಲಾ ನಾಗೇಶ್, ಮುರ್ಡೇಶ್ವರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.