ಮನುಷ್ಯ ತನ್ನ ಮನುಷ್ಯತ್ವವನ್ನು ಮರೆತು ತಾನೇ ಸೃಷ್ಟಿಸಿಕೊಂಡಿರುವ ಜಾತಿ-ಮತಗಳು ಅವನನ್ನೇ ಆಳುತ್ತಿರುವುದು ದುರದೃಷ್ಟಕರ ಸಂಗತಿ. ಇಂತಹ ಸಂದರ್ಭದಲ್ಲಿ, ಕೇರಳದ ಇಡುಕ್ಕಿ ಜೆಲ್ಲೆಯ ಗ್ರಾಮ ಪಂಚಾಯಿತಿಯೊಂದು ಸಮುದಾಯದ ಸಲೂನ್ ಸ್ಥಾಪನೆಗೆ ನಿರ್ಧರಿಸಿರುವುದು ಮಾನವೀಯತೆ ಕಡೆಗಿನ ದಿಟ್ಟ ಹೆಜ್ಜೆ.
ವಟ್ಟವಡ ಎಂಬ ಗ್ರಾಮದ ಕ್ಷೌರದಂಗಡಿಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರಿಗೆ ಕ್ಷೌರ ಮಾಡಲು ನಿರಾಕರಿಸುತ್ತಿದ್ದುದರಿಂದ, ಎಲ್ಲ ಸಮುದಾಯದವರಿಗೂ ಅನ್ವಯಿಸುವ ಸಲೂನನ್ನು ನಿರ್ಮಿಸಲು ಖುದ್ದು ಪಂಚಾಯಿತಿಯೇ ಮುಂದಾಗಿರುವುದು (ಪ್ರ.ವಾ., ಸೆ. 11) ಮಾದರಿ ನಡೆ. ದಶಕಗಳಿಂದ ನಡೆಯುತ್ತಿದ್ದ ಜಾತಿ ತಾರತಮ್ಯ ನಿರ್ಮೂಲನೆಗೆ ಇದು ಸಹಕಾರಿ.
-ನಾಗೇಶ್ ಹರಳಯ್ಯ, ಕಲುಬುರ್ಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.