ADVERTISEMENT

30 ಪ್ರಯಾಣಿಕರ ನಿಯಮ ದಾಖಲೆಯಲ್ಲಿ ಮಾತ್ರ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಮೇ 2020, 15:45 IST
Last Updated 25 ಮೇ 2020, 15:45 IST

ಶೇಕಡ 15ರಷ್ಟು ಪ್ರಯಾಣ ದರವನ್ನು ಹೆಚ್ಚಿಸಿ ಖಾಸಗಿ ಬಸ್ ಸಂಚಾರ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ಕೆಲ ತಿಂಗಳ ಹಿಂದಷ್ಟೇ ಖಾಸಗಿ ಬಸ್ ಪ್ರಯಾಣ ದರವನ್ನು ಶೇ 10ರಷ್ಟು ಹೆಚ್ಚಿಸಲಾಗಿತ್ತು. ಲಾಕ್‌ಡೌನ್‌ನಿಂದ ಜನಸಾಮಾನ್ಯರು ತತ್ತರಿಸಿರುವ ಈ ಸಂದರ್ಭದಲ್ಲಿ ಮತ್ತೆ ಶೇಕಡ 15ರಷ್ಟು ಪ್ರಯಾಣ ದರ ಹೆಚ್ಚಿಸಿದಲ್ಲಿ ಗಾಯಕ್ಕೆ ಉಪ್ಪು ಸವರಿದಂತೆಯೇ ಸರಿ.

ಒಮ್ಮೆ ಪ್ರಯಾಣಕ್ಕೆ 30 ಜನ ಎಂದು ನಿಗದಿಪಡಿಸಿರುವುದು ನಿಯಮಗಳ ದಾಖಲೆಯಲ್ಲಿ ಮಾತ್ರ ಸಾಧ್ಯವೇನೊ! ಲಾಕ್‌ಡೌನ್ ಶುರುವಾದಾಗ ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಕ್ಕೆ ಕೆಎಸ್ಆರ್‌ಟಿಸಿ ಬಸ್‌ಗಳನ್ನು ಅಗತ್ಯ ಸೇವೆಯ ಸಿಬ್ಬಂದಿಗೆಂದು ಬಿಟ್ಟಿದ್ದರು. ಇದರಲ್ಲಿ ದಿನವೂ 40-50 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಮೊದಲು, ನಿಯಮದಂತೆ 30 ಟಿಕೆಟ್‌ಗಳನ್ನು ಮಾತ್ರ ಕೊಡಲಾಗುತ್ತಿತ್ತು. ಆದರೆ 30ರ ನಂತರದ ಯಾವುದೇ ಪ್ರಯಾಣಿಕರಿಗೆ ಹಣ ಪಡೆದು ಟಿಕೆಟ್ ನೀಡುತ್ತಿರಲಿಲ್ಲವಾದರೂ ಬಸ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು!

ನಮ್ಮಲ್ಲಿ ಹೀಗೂ ನಿಯಮಗಳು ಪಾಲನೆಯಾಗುತ್ತವೆ! ಹೀಗಾಗಿ ಸಾರಿಗೆ ಸಚಿವರು ಪ್ರಯಾಣ ದರ ಹೆಚ್ಚಿಸಿ ಪ್ರಯಾಣಿಕರಿಗೆ ಹೊರೆಯಾಗಿಸುವ ಬದಲು, ಬಸ್ ಮಾಲೀಕರಿಂದ ಕೆಲ ಕಾಲ ರಸ್ತೆ ತೆರಿಗೆ ಪಡೆಯದೇ ಇರುವುದು ಒಳ್ಳೆಯದು.

ADVERTISEMENT

ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.