ADVERTISEMENT

ರಸ್ತೆ ಉಬ್ಬಿಗೂ ಟೋಲ್ ವಸೂಲಿ?

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 20:58 IST
Last Updated 20 ಡಿಸೆಂಬರ್ 2020, 20:58 IST

ಹಾವೇರಿ- ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಹಾವೇರಿಯಿಂದ 10 ಕಿ.ಮೀ. ದೂರದ ಆಲದಕಟ್ಟೆ ಬಳಿಯ ಟೋಲ್‌ಗೇಟ್‌ನಲ್ಲಿ ₹ 30 ವಸೂಲಿ ಮಾಡುತ್ತಾರೆ. ಅಲ್ಲಿಂದ ಮುಂದೆ ಹೊಸಳ್ಳಿ, ಕಲಮತ್ತಿಹಳ್ಳಿ, ಗೌರಾಪುರ, ಹಾನಗಲ್‌ವರೆಗೂ ಅಸಂಖ್ಯ ರಸ್ತೆ ಉಬ್ಬುಗಳು ಪ್ರಯಾಣಿಕರನ್ನು ಹೈರಾಣಾಗಿಸುತ್ತವೆ. ಪ್ರತೀ ಊರಿಗೆ ಆರು, ಏಳು, ಅದರಲ್ಲೂ ಕೆಲವೆಡೆ ಒಂದೇ ಕಡೆ ಆರಾರು ಹಂಪ್‌ಗಳಿವೆ! ಪ್ರಯಾಣಿಕರಲ್ಲಿ ರೋಗಿಗಳಿದ್ದರಂತೂ ದೇವರೇ ಗತಿ.

ಟೋಲ್ ಕೊಟ್ಟ ಬಿಸಿ ಒಂದೆಡೆ, ರಸ್ತೆ ಉಬ್ಬುಗಳ ಮೇಲೆ ಎತ್ತೆತ್ತಿ ಹಾಕುವ ಧಡಂ ದಡಿಕಿ ಇನ್ನೊಂದೆಡೆ. ಪೆಟ್ರೋಲ್ ಅಪವ್ಯಯ ಬೇರೆ! ರಾಜ್ಯ ಹೆದ್ದಾರಿ ನಿಗಮ ಈ ಕಡೆಗೆ ದೃಷ್ಟಿ ಹಾಯಿಸೀತೇ?
-ಕೆ.ಶ್ರೀನಿವಾಸ ರಾವ್,ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT