ADVERTISEMENT

ಗನ್‍ಮ್ಯಾನ್ ಇರಲಿಲ್ಲವೇಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಜುಲೈ 2022, 19:09 IST
Last Updated 7 ಜುಲೈ 2022, 19:09 IST

ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರು ಹುಬ್ಬಳ್ಳಿಯ ಹೋಟೆಲೊಂದರಲ್ಲಿ ಭೀಕರವಾಗಿ ಹತ್ಯೆ
ಗೊಳಗಾಗಿದ್ದು ದುರದೃಷ್ಟಕರ. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಹತ್ಯೆಯ ದೃಶ್ಯವನ್ನು ನೋಡಿದಾಗ, ಹೋಟೆಲ್ ರಿಸೆಪ್ಷನ್ ಲಾಬಿಯಲ್ಲಿದ್ದ ಕೆಲವರು ರಕ್ಷಿಸಲು ಮುಂದಾಗುತ್ತಾರಾದರೂ ಅಧೀರರಾಗಿಬಿಡುವುದು ತಿಳಿಯುತ್ತದೆ. ಆದರೆ ಇಂತಹ ಐಷಾರಾಮಿ ಹೋಟೆಲ್‌ನಲ್ಲಿ ಗನ್‍ಮ್ಯಾನ್ ಇರಲಿಲ್ಲ ಏಕೆ ಎಂಬ ಪ್ರಶ್ನೆ ಮೂಡುತ್ತದೆ. ಗಣ್ಯರು ಐಷಾರಾಮಿ ಹೋಟೆಲ್‌ನಲ್ಲಿ ಉಳಿಯುವುದಕ್ಕೆ ಭದ್ರತೆಯೂ ಒಂದು ಕಾರಣವಾಗಿರುತ್ತದೆ. ಘಟನಾ ಸ್ಥಳದಲ್ಲಿ ಗನ್‍ಮ್ಯಾನ್ ಇದ್ದಿದ್ದರೆ ಕಿಡಿಗೇಡಿಗಳಿಗೆ ಗುಂಡಿಕ್ಕಿ ಗುರೂಜಿಯನ್ನು ರಕ್ಷಿಸಬಹುದಿತ್ತು.

⇒ಆರ್.ವೆಂಕಟರಾಜು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT