ADVERTISEMENT

ವಿಚಿತ್ರ ಅಡ್ಡ ಹೆಸರು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 17:21 IST
Last Updated 8 ಮಾರ್ಚ್ 2021, 17:21 IST

‘ರೌಡಿ ಚೆಡ್ಡಿಗೆ ಗುಂಡೇಟು’ ಎಂಬ ಶೀರ್ಷಿಕೆಯನ್ನು ಕೆಲವು ಪತ್ರಿಕೆಗಳಲ್ಲಿ ಓದಿದೊಡನೆ ಅಚ್ಚರಿಯಾಯಿತು. ಕಾಲಿಗೆ ಗುಂಡು, ಬೆನ್ನಿಗೆ ಗುಂಡು, ಹೊಟ್ಟೆಗೆ ಗುಂಡು, ತಲೆಗೆ ಗುಂಡು ಮುಂತಾಗಿ ಓದಿದ್ದವರಿಗೆ ಈ ‘ಚೆಡ್ಡಿಗೆ ಗುಂಡು’ ಎಂಬ ಸುದ್ದಿ ಕುತೂಹಲ ತಂದಿತು. ಓದು ಮುಂದುವರಿಸಿದಂತೆ ತಿಳಿದಿದ್ದು ‘ಚೆಡ್ಡಿ’ ಎಂಬುದು ಆ ರೌಡಿಯ ಅಡ್ಡ ಹೆಸರು. ಮಚ್ಚ, ಚೂರಿ, ಬಾಂಬ್‌, ಗನ್... ಎಂತೆಂತಹ ಅಡ್ಡ ಹೆಸರುಗಳಿವೆಯೋ?

ಮಕ್ಕಳಿಗೆ ಮುದ್ದಿನಿಂದ ಚಿನ್ನ, ರನ್ನ, ಮುದ್ದು, ಪುಟ್ಟು, ಕಂದ, ಬಂಗಾರಿ, ಅಮ್ಮು ಮುಂತಾದ ಹತ್ತು ಹಲವು ಹೆಸರುಗಳನ್ನು ಇಟ್ಟು ಕರೆಯುತ್ತಾ ಸಂತೋಷಪಡುತ್ತೇವೆ. ಆದರೆ ಪಾತಕಲೋಕದಲ್ಲಿನ ಅಡ್ಡಹೆಸರುಗಳು ವಿಚಿತ್ರವಾಗಿದ್ದು ಅಚ್ಚರಿ ಮೂಡಿಸುತ್ತವೆ. ಮಾಧ್ಯಮಗಳಲ್ಲೂ ಇಂತಹ ಅಡ್ಡಹೆಸರುಗಳೇ ಮುಂಚೂಣಿಗೆ ಬಂದು ಮೂಲ ಹೆಸರುಗಳು ಗೌಣವಾಗುವುದು ವಿಚಿತ್ರ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.