ADVERTISEMENT

ವಿದ್ಯಾರ್ಥಿಗಳಿಗೆ ಬೇಕು ಆಪ್ತ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 19:31 IST
Last Updated 24 ಡಿಸೆಂಬರ್ 2020, 19:31 IST

ಶಿವಮೊಗ್ಗದ ಅಂತಿಮ ಎಂಬಿಬಿಎಸ್ ವಿದ್ಯಾರ್ಥಿನಿ ಲಲಿತಾ ಅವರು ಆತ್ಮಹತ್ಯೆ ಮಾಡಿಕೊಳ್ಳುವ (ಪ್ರ.ವಾ., ಡಿ. 24) ಮುನ್ನ, ತಮ್ಮನ್ನು ಸಾಕಿ ಸಲಹಲು ಪೋಷಕರು ವಹಿಸಿದ್ದ ಶ್ರಮದ ಬಗ್ಗೆ ಯೋಚಿಸಬೇಕಿತ್ತು. ವಿದ್ಯಾರ್ಥಿಗಳು ಇಂತಹ ಕೃತ್ಯಕ್ಕೆ ಯಾಕೆ ಮುಂದಾಗುತ್ತಾರೆ? ಎಲ್ಲ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಆಗಾಗ ಆಪ್ತ ಸಮಾಲೋಚನೆ ನಡೆಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು.

ರೈತರು, ವೈದ್ಯರು ಸಮಾಜದ ಮುಖ್ಯ ಸಂಪನ್ಮೂಲ ವ್ಯಕ್ತಿಗಳು. ಆದರೆ ಸೂಕ್ತ ಸವಲತ್ತುಗಳಿಲ್ಲದೆಯೋ ಯಾವುದೋ ವಿಷಯಕ್ಕೆ ನೊಂದೋ ಆತ್ಮಹತ್ಯೆಗೆ ಶರಣಾಗುವ ಇವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದು ನಿಜಕ್ಕೂ ದುಃಖದ ವಿಷಯ.
-ವಿಶಾಲಾ ಆರಾಧ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT