ADVERTISEMENT

ಟೋಯಿಂಗ್ ಅಕ್ರಮಕ್ಕೆ ಬೀಳಲಿ ಬ್ರೇಕ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 19:30 IST
Last Updated 17 ಫೆಬ್ರುವರಿ 2021, 19:30 IST

ಬೆಂಗಳೂರಿನಲ್ಲಿ ಟೋಯಿಂಗ್ ಜಾಲದ ಕಿರಿಕಿರಿ ಮತ್ತು ಅಕ್ರಮಗಳ ಬಗೆಗಿನ ವರದಿ (ಪ್ರ.ವಾ., ಫೆ. 15) ಶ್ಲಾಘನೀಯ. ಎಷ್ಟೋ ಜನರ ಆಕ್ರೋಶ ಇಲ್ಲಿ ವ್ಯಕ್ತವಾಗಿದೆ. ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುವವರಿಗೆ ಶಿಕ್ಷೆ ಆಗಲೇಬೇಕು ನಿಜ. ಆದರೆ ಕಲ್ಲುಗಳನ್ನು ಇಟ್ಟು, ಅದು ನೋ ಪಾರ್ಕಿಂಗ್ ಸೂಚನಾ ಫಲಕಕ್ಕೆ ಸಮ ಎಂದು ಹೇಳಿರುವುದು ಹಾಸ್ಯಾಸ್ಪದ ಮತ್ತು ಖಂಡನೀಯ.

ನೋ ಪಾರ್ಕಿಂಗ್ ನಿಯಮಗಳನ್ನು ಪಾಲಿಸದವರಿಗೆ ದಂಡ ವಿಧಿಸುವಾಗ, ಈ ಕಾರ್ಯದಲ್ಲಿ ಭಾಗಿಯಾಗುವ ಸಿಬ್ಬಂದಿಯೂ ಕೆಲ ನಿಯಮಗಳನ್ನು ಅನುಸರಿಸಬೇಕಲ್ಲವೇ? ಜತೆಗೆ ನಿಗದಿತ ಶುಲ್ಕ ಪಾವತಿಸಲು ಸಾಧ್ಯವಾಗದವರ ಬಳಿ ಅಕ್ರಮವಾಗಿ ಹಣ ಸ್ವೀಕರಿಸುವುದು ಸರ್ಕಾರಕ್ಕೆ ಮಾಡುವ ಮೋಸ. ಇದರಿಂದ ಸರ್ಕಾರದ ವರಮಾನಕ್ಕೂ ಹೊಡೆತ. ಈಗಲಾದರೂ ಇಂತಹ ಅಕ್ರಮಗಳಿಗೆ ಬ್ರೇಕ್ ಹಾಕಬೇಕು.
-ಪ್ರದೀಪ್ ಸಿ.ಎಂ.,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT