ADVERTISEMENT

ಶಿಕ್ಷಕರಿಗೆ ರಜಾ ರಹಿತ ಪದ್ಧತಿ ಬೇಡ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 18:20 IST
Last Updated 25 ಸೆಪ್ಟೆಂಬರ್ 2019, 18:20 IST

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ದಸರಾ ಹಾಗೂ ಬೇಸಿಗೆ ರಜೆ ರದ್ದುಪಡಿಸುವ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ (ಪ್ರ.ವಾ., ಸೆ. 24). ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೋಡಿದರೆ ಇಂತಹ ಕ್ರಮದಿಂದ ಸಮಸ್ಯೆಗಳು ಎದುರಾಗುತ್ತವೆ. ಶಿಕ್ಷಕರಿಗೆ ವರ್ಷಕ್ಕೆ 30 ಗಳಿಕೆ ರಜೆಗಳನ್ನು ನೀಡಿದಾಗ ಎಲ್ಲ ರಜೆಗಳನ್ನೂ ನಗದಾಗಿ ಪರಿವರ್ತಿಸಿಕೊಳ್ಳಲು ಸಾಧ್ಯವಾಗದು. ಹೀಗಾಗಿ ಅವರು ಕಲಿಕೆಯ ಸಮಯದಲ್ಲಿ ರಜೆ ಹಾಕಿ ತೆರಳುತ್ತಾರೆ. ಒಂದು ಶಾಲೆಯ ಇಬ್ಬರು-ಮೂವರು ಶಿಕ್ಷಕರು ಹೀಗೆ ಏಕಕಾಲದಲ್ಲಿ ರಜೆಯ ಮೇಲೆ ತೆರಳಿದರೆ ಶೈಕ್ಷಣಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.

ಹಿಂದೆ ಇದ್ದಂತೆ ದಸರಾ ರಜೆಯನ್ನು 22 ದಿನ ಮತ್ತು ಬೇಸಿಗೆ ರಜೆಯನ್ನು 50 ದಿನ ನೀಡಿ ಶಿಕ್ಷಕರನ್ನು ಇತರ ಕೆಲಸಗಳಿಂದ ಮುಕ್ತಗೊಳಿಸಬೇಕು. ಉಳಿದ ವೃತ್ತಿಗೂ ಶಿಕ್ಷಕ ವೃತ್ತಿಗೂ ಬಹಳಷ್ಟು ವ್ಯತ್ಯಾಸ ಇರುವುದರಿಂದ ಈ ಬಗ್ಗೆ ಇನ್ನೂ ಹೆಚ್ಚಿನ ಚಿಂತನೆ ನಡೆಸಿ ತೀರ್ಮಾನ ಕೈಗೊಳ್ಳಬೇಕು.

ಜಿ.ಆರ್.ಹೆಗಡೆ, ಶಿರಸಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.