ADVERTISEMENT

ರಂಗ ಚಟುವಟಿಕೆಗೆ ತಾತ್ಕಾಲಿಕ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 20:25 IST
Last Updated 25 ಡಿಸೆಂಬರ್ 2020, 20:25 IST

ಬೆಂಗಳೂರಿನ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿನ ಸಾಂಸ್ಕೃತಿಕ ಸಮುಚ್ಚಯವನ್ನು ‘ರಂಗಮಂದಿರ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಗಣಿಸದೇ ಇರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಆದರೆ ಇಲಾಖೆಯ ಇಂತಹ ನಿರ್ಧಾರಕ್ಕೆ ಸಕಾರಣ ಇದೆ. ಇದರ ಹಿನ್ನೆಲೆ ಗಮನಿಸುವುದಾದರೆ, ಬೆಂಗಳೂರಿನ ಹೃದಯ ಭಾಗದ ರವೀಂದ್ರ ಕಲಾಕ್ಷೇತ್ರಕ್ಕೆ ಅತೀವ ಬೇಡಿಕೆ ಉಂಟಾಗಿ, ಆರ್.ನಾಗೇಶ್ ಅವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿದ್ದ ವೈ.ಕೆ.ಮುದ್ದುಕೃಷ್ಣ ಅವರನ್ನು ರಂಗಕರ್ಮಿಗಳು ಭೇಟಿ ಮಾಡಿದ್ದರು.

ಎಲ್ಲಾ ಕಲಾತಂಡಗಳು ರವೀಂದ್ರ ಕಲಾಕ್ಷೇತ್ರವನ್ನೇ ಚಟುವಟಿಕೆಗಾಗಿ ಅವಲಂಬಿಸಿವೆ, ಈ ದಿಸೆಯಲ್ಲಿ ಪರ್ಯಾಯ ವ್ಯವಸ್ಥೆಯೊಂದನ್ನು ರೂಪಿಸಬೇಕೆಂದು ಮನವಿ ಸಲ್ಲಿಸಿದ್ದರು. ತದನಂತರ ರಂಗ ಚಟುವಟಿಕೆಗಳನ್ನು ನಡೆಸಲು ಕಲಾಗ್ರಾಮವು ಒಂದು ತಾತ್ಕಾಲಿಕ ವ್ಯವಸ್ಥೆಯಂತೆ ಒದಗಿಬಂತು. ಹೀಗಾಗಿ, ಇದು ಒಂದು ಒಡಂಬಡಿಕೆಯ ಮೂಲಕ ಬಗೆಹರಿಸಿಕೊಳ್ಳಬೇಕಾದ ವಿಚಾರವೇ ಹೊರತು ಪ್ರತಿಭಟನೆಗೆ ಯೋಗ್ಯವಾದ ಸಂಗತಿಯಲ್ಲ.
-ಆರ್.ವೆಂಕಟರಾಜು, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.