ADVERTISEMENT

ಇದುವೇ ಉದಾರ ಸಂಸ್ಕೃತಿ!

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 18:45 IST
Last Updated 24 ಜೂನ್ 2020, 18:45 IST

ಒಂದು ರಾಜ್ಯದ ಸಂಸ್ಕೃತಿಯನ್ನು ಹೊರಗಿನವರು ಅರಿಯಬೇಕಾದರೆ, ಆ ಪ್ರದೇಶದ ಸಾಂಸ್ಕೃತಿಕ ಚಟುವಟಿಕೆಗಳ ದರ್ಶನ ಮಾಡಬೇಕು ಎಂಬ ಮಾತಿದೆ. ಕಳೆದ ಒಂದು ವರ್ಷದಿಂದ ನಮ್ಮ ರಾಜ್ಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸ್ತಬ್ಧಗೊಂಡ ಸ್ಥಿತಿಯಲ್ಲಿವೆ. ಹೊಸ ಹೊಸ ಯೋಜನೆಗಳಿಗೆ ಅರ್ಥಾತ್ ಅಕಾಡೆಮಿಗಳಿಗೆ ಅನುದಾನ ಕಡಿತಗೊಂಡಿದೆ.

ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಇನ್ನೊಂದು ಇಲಾಖೆಯಲ್ಲಿ ವಿಲೀನಗೊಳಿಸಲು ಸರ್ಕಾರ ಹೊರಟಿದೆ. ಅಸಹಾಯಕ ಕಲಾವಿದರಿಗೆ, ಸಾಹಿತಿಗಳಿಗೆ ₹ 2,000 ನೆರವು ನೀಡಿ ತನ್ನ ಉದಾರ ಸಂಸ್ಕೃತಿಯನ್ನು ಮೆರೆದಿದೆ! ಇಂತಹ ಸ್ಥಿತಿಯಲ್ಲಿ, ‘ಇದೇನ ಸಭ್ಯತೆ, ಇದೇನ ಸಂಸ್ಕೃತಿ...’ ಎಂಬ ಸಿನಿಮಾ ಹಾಡು ನೆನಪಿಗೆ ಬರುತ್ತದೆ.

- ಬಿ.ಎಸ್.ಗವಿಮಠ,ಬೆಳಗಾವಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.