ADVERTISEMENT

ಬೆದರಿಕೆ ಕರೆ: ಅವಿವೇಕಿಗಳ ಕೃತ್ಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 16:48 IST
Last Updated 7 ಸೆಪ್ಟೆಂಬರ್ 2020, 16:48 IST

ಅನೇಕ ಕಷ್ಟ ಕೋಟಲೆಗಳನ್ನು, ಮಾನ ಅಪಮಾನಗಳನ್ನು ಅನುಭವಿಸಿ ಈ ದೇಶಕ್ಕೆ ಸಂವಿಧಾನ ರೂಪಿಸಿಕೊಟ್ಟ ಡಾ. ಬಿ.ಆರ್‌.ಅಂಬೇಡ್ಕರ್‌ ಅವರನ್ನು ಕುರಿತ ‘ಮಹಾನಾಯಕ’ ಧಾರಾವಾಹಿಯನ್ನು ಪ್ರಸಾರ ಮಾಡದಂತೆ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್‌ ಹೆಡ್‌ಗೆ ಬೆದರಿಕೆ ಕರೆ ಬಂದಿರುವುದು ದುರದೃಷ್ಟಕರ. ಈ ಧಾರಾವಾಹಿಯ ಮೂಲಕ, ಅಂದಿನ ಸಾಮಾಜಿಕ ವ್ಯವಸ್ಥೆ, ಜಾತಿ ಪದ್ಧತಿ, ಅಸಮಾನತೆ, ಅನಿಷ್ಟ ಪದ್ಧತಿಗಳ ಚಿತ್ರಣ ಇಂದಿನ ಸಮಾಜಕ್ಕೆ ತಿಳಿಯುತ್ತಿದೆ. ಮನಃಪರಿವರ್ತನೆಗೆ ಇದು ದಾರಿದೀಪವಾಗಿದೆ.

ಅಂಬೇಡ್ಕರ್ ಅವರ ಬಗ್ಗೆ ಪೂರ್ಣ ತಿಳಿದವರು ಯಾರೂ ಹೀಗೆ ವರ್ತಿಸುವುದಿಲ್ಲ. ಅವಿವೇಕಿಗಳಷ್ಟೇ ಹೀಗೆ ನಡೆದುಕೊಳ್ಳಲು ಸಾಧ್ಯ. ಬೆದರಿಕೆ ಕರೆಗಳು ಅವರ ಮನಃಸ್ಥಿತಿಯನ್ನು ಬಿಂಬಿಸುತ್ತವೆ.ಇಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

– ಸುಶೀಲಾ ಮಂಜುನಾಥ್,ಇನಮಿಂಚೇನಹಳ್ಳಿ, ಚಿಕ್ಕಬಳ್ಳಾಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.