ADVERTISEMENT

ನಾಣ್ಯ ಎಸೆಯದಿರಿ, ವಿನಿಯೋಗಿಸಿ

​ಪ್ರಜಾವಾಣಿ ವಾರ್ತೆ
Published 6 ಮೇ 2019, 19:55 IST
Last Updated 6 ಮೇ 2019, 19:55 IST

ನಮ್ಮ ಪೂರ್ವಜರು ಜಲಮೂಲಗಳಾದ ಕೆರೆ, ನದಿಗಳನ್ನು ಗಂಗಾಮಾತೆ ಎಂಬ ಪೂಜ್ಯ ಭಾವನೆಯಿಂದ ನೋಡುತ್ತಿದ್ದರು. ಅವು ತುಂಬಿದಾಗ ಬಾಗಿನ ಕೊಡುವುದು, ಹಬ್ಬ ಹರಿದಿನಗಳಲ್ಲಿ ಪೂಜಿಸುವ ಮೂಲಕ ಆ ಸಂಪ್ರದಾಯವನ್ನು ನಾವು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದೇವೆ. ಎಡೆಯ ಹೆಸರಿನಲ್ಲಿ ಮಾಡಿಟ್ಟ ಸಿಹಿ ತಿನಿಸುಗಳನ್ನು ನಾವು ಸಂಪ್ರದಾಯದಂತೆ ನೀರಿಗೆ ಹಾಕುವುದೇನೋ ಸರಿ. ಇವನ್ನು ಜಲಚರಗಳು ತಿನ್ನುತ್ತವೆ.

ಈ ಮೂಲಕ ಅವಕ್ಕೂ ಆಹಾರ ಸಿಕ್ಕಿದಂತಾಗುತ್ತದೆ. ಆದರೆ ಕೆಲವರು ನಾಣ್ಯಗಳನ್ನು ನದಿ, ಕೆರೆಗಳಲ್ಲಿ ಎಸೆಯುತ್ತಾರೆ. ಇದು ನಂಬಿಕೆಗೆ ಸಂಬಂಧಿಸಿದ ವಿಚಾರವೆಂದು ಸುಮ್ಮನಿರಲು ಸಾಧ್ಯವಿಲ್ಲ. ಏಕೆಂದರೆ ನಾಣ್ಯಗಳು ಸದುಪಯೋಗವಾಗದೆ ವ್ಯರ್ಥವಾಗುತ್ತವೆ. ಇದರಿಂದ ಚಿಲ್ಲರೆಯ ಅಭಾವ ಉಂಟಾಗಬಹುದು. ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದು. ಬೇಕಾದರೆ ಅದೇ ನಾಣ್ಯ ವಿನಿಯೋಗಿಸಿ, ತಿನ್ನಬಹುದಾದ ವಸ್ತುಗಳನ್ನು ಕೊಂಡು ನೀರಿನಲ್ಲಿ ಎಸೆಯಲಿ. ಆ ಮೂಲಕ ನಮ್ಮ ಭಕ್ತಿಯು ದೇವರಿಗೆ ಸಲ್ಲಲಿ.

- ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.