ADVERTISEMENT

ಕೊಂದದ್ದು ಸೈನಿಕರನ್ನಷ್ಟೇ ಅಲ್ಲ...

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 20:15 IST
Last Updated 15 ಫೆಬ್ರುವರಿ 2019, 20:15 IST

ಅಪ್ಪ ಬರ‍್ತಾನೆ ಅಂತ ಕಾದು ಕೂತಿದ್ದ ಮಗಳು, ಮಗನ ರಜೆಗಾಗಿ ಕಾದಿದ್ದ ಹೆತ್ತವರು, ಅಣ್ಣನಿಗೆ ಕಾದಿದ್ದ ತಂಗಿ, ಗಂಡನಿಗೋಸ್ಕರ ನಿರೀಕ್ಷಿಸುತ್ತಿದ್ದ ಹೆಂಡತಿ... ಉಗ್ರರು ಕೊಂದದ್ದು ಬರೀ ಸೈನಿಕರನ್ನಲ್ಲ, ಅದೆಷ್ಟೋ ನಂಬಿಕೆಗಳನ್ನು!

ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಸೈನಿಕರ ಸಾವು ಒಂದು ಲೆಕ್ಕವಾಗಬಹುದು ಅಷ್ಟೆ. ಆದರೆ ಅದರ ಹಿಂದಿನ ಅದೆಷ್ಟೋ ಕುಟುಂಬಗಳ ನೋವು, ಭಾರತೀಯರ ಆಕ್ರೋಶವನ್ನು ಪಾಕಿಸ್ತಾನ ಲೆಕ್ಕವಿಟ್ಟಿಲ್ಲ
ಎನಿಸುತ್ತದೆ. ಭಾರತದ ‘ಸರ್ಜಿಕಲ್ ಸ್ಟ್ರೈಕ್‌’ ಪಾಕಿಸ್ತಾನದ ಭಯೋತ್ಪಾದಕ ಕೃತ್ಯಕ್ಕೆ ಉತ್ತರವಾಗಿತ್ತೇ ವಿನಾ ಭಾರತವೇ ಆರಂಭಿಸಿದ್ದಲ್ಲ. ಆದರೆ ನಮ್ಮ ಸರ್ಜಿಕಲ್ ಸ್ಟ್ರೈಕ್‌ಗೆ ಪ್ರತ್ಯುತ್ತರವೆಂಬಂತೆ ಅವರು ಮತ್ತೆ ದಾಳಿ ನಡೆಸಿದ್ದು ಭಂಡತನದ ಪರಮಾವಧಿ. ಬಹುಶಃ ಇಂದು ಪಾಕಿಸ್ತಾನದ ಪ್ರಜೆಗಳೂ ನಾವು ‘ಉರಿ’ ಸಿನಿಮಾ ನೋಡಿ ಖುಷಿ
ಪಟ್ಟೆವಲ್ಲಾ ಅಷ್ಟೇ ಖುಷಿಪಡುತ್ತಿರಬಹುದು.

ಪಾಕಿಸ್ತಾನ ಇಂತಹ ಹೀನ ಕೃತ್ಯ ನಡೆಸಿದಾಗಲೆಲ್ಲಾ, ಭಾರತೀಯರ ಜೊತೆ ಬೆರೆತು ಬಾಳುತ್ತಿರುವ ಭಾರತದ ಕೋಟ್ಯಂತರ ಮುಸ್ಲಿಮರು ಅವಮಾನಕ್ಕೀಡಾಗುತ್ತಾರೆ. ‘ನಾವು, ಅವರಲ್ಲ’ ಎಂದು ಸಮರ್ಥನೆ ಕೊಟ್ಟುಕೊಳ್ಳಬೇಕಾದ ಅನಿವಾರ್ಯಕ್ಕೆ ಸಿಕ್ಕಿಕೊಳ್ಳುತ್ತಾರೆ. ಸಹಿಸಲು ಅಸಾಧ್ಯವಾದ ನೋವನ್ನು ಅನುಭವಿಸುತ್ತಾರೆ ಎಂಬುದನ್ನು ಪಾಕಿಸ್ತಾನ ಗಮನಿಸಬೇಕು. ಅದರ ಚಾಳಿ ಹೀಗೇ ಮುಂದುವರಿದರೆ ಭಾರತದ ಮುಸ್ಲಿಮರೇ ಆ ದೇಶದ ವಿರುದ್ಧ ದಂಗೆ ಏಳಬಹುದು.

ADVERTISEMENT

ಮಣಿಕಂಠ ಪಾ. ಹಿರೇಮಠ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.