ADVERTISEMENT

ವಾಚಕರ ವಾಣಿ | ಪರಿಸ್ಥಿತಿಯ ಲಾಭಕೋರರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 19:30 IST
Last Updated 6 ಆಗಸ್ಟ್ 2020, 19:30 IST

‘ಉರಿವ ಮನೆಯಲ್ಲಿಗಳ ಹಿರಿದರು’ ಎಂಬ ಗಾದೆಯು ಕೋವಿಡ್‌ ಸಂಕಷ್ಟದ ಈ ಕಾಲದಲ್ಲಿ ನಿಜವಾಗುತ್ತಿದೆ. ಒಂದೆಡೆ, ಕೋವಿಡ್ ಹೆಸರಿನಲ್ಲಿ ದಿನಸಿ ಅಂಗಡಿಯವರು ದಿನಸಿಗಳ ಬೆಲೆಯನ್ನು ಹೆಚ್ಚಿಸಿದ್ದರೆ, ಇನ್ನೊಂದೆಡೆ ಔಷಧ ಕಂಪನಿಯವರು ಔಷಧಗಳ ಬೆಲೆಯನ್ನು ಹೆಚ್ಚಿಸತೊಡಗಿದ್ದಾರೆ. ಲಾಕ್‌ಡೌನ್ ಕಾಲದಲ್ಲಿ ತಮಗೆ ಉಂಟಾದ ನಷ್ಟವನ್ನು ಸರಿದೂಗಿಸಿಕೊಳ್ಳಲು ಆಟೊದವರು ಕೂಡ ಪ್ರಯಾಣ ದರವನ್ನು ಹೆಚ್ಚಿಸಿದ್ದಾರೆ. ಕೆ.ಎಂ.ಎಫ್ ಹಾಲಿನ ದರವನ್ನು ಹೆಚ್ಚಿಸದೇ ಇದ್ದರೂ ಹಾಲನ್ನು ಮಾರುವ ರೀಟೇಲ್ ವರ್ತಕರು ಕೆಲವೆಡೆ ಪ್ಯಾಕೆಟ್‌ಗೆ ಒಂದು ರೂಪಾಯಿ ಹೆಚ್ಚಿಗೆ ತೆಗೆದುಕೊಳ್ಳುತ್ತಿದ್ದಾರೆ.

ಬೇಡಿಕೆ ಹೆಚ್ಚಾಗಿರುವುದರಿಂದ ವಿಟಮಿನ್ ‘ಸಿ’ ಗುಳಿಗೆಗಳ ಬೆಲೆ ಎರಡು–ಮೂರು ಪಟ್ಟು ಹೆಚ್ಚಾಗಿದೆ. ಇಪ್ಪತ್ತು ಗುಳಿಗೆಗಳು ಇರುವ ಒಂದು ಸ್ಟ್ರಿಪ್‌ ಮೊದಲು ₹ 23ಕ್ಕೆ ದೊರೆಯುತ್ತಿತ್ತು. ಈಗ ಅದರ ಬೆಲೆ ₹ 70ರಿಂದ 75 ಆಗಿದೆ. ಪರಿಸ್ಥಿತಿಯ ಲಾಭ ಪಡೆಯುವವರಿಂದ ಸಾಮಾನ್ಯ ಜನ ಬೆಲೆ ತೆರುವಂತಾಗಿರುವುದು ದುರದೃಷ್ಟಕರ.

-ಮುರಲೀಧರ ಕುಲಕರ್ಣಿ, ಬೀದರ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.