ADVERTISEMENT

ಬ್ಯಾಂಕ್‌ ಠೇವಣಿ ಸುರಕ್ಷಿತವೆಂದು ನಂಬಬೇಕೇ?

ಎಚ್.ಎಸ್.ಮಂಜುನಾಥ
Published 28 ಜೂನ್ 2018, 20:23 IST
Last Updated 28 ಜೂನ್ 2018, 20:23 IST

ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಹಿರಿಯ ಅಧಿಕಾರಿಗಳನ್ನುಬಂಧಿಸಿರುವುದಕ್ಕೆ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (AIBEA) ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನು ಖಂಡಿಸಿ ಬ್ಯಾಂಕುಗಳ ಸಂಘವೂ (IBA) ಅರ್ಥ ಸಚಿವರಿಗೆ ಪತ್ರ ಬರೆದಿದೆ. ಕೆಲವು ದಿನಗಳ ಹಿಂದೆಯಷ್ಟೇ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು (AIBOC) ದಿವಾಳಿತನ ಕಾರ್ಯಾಚರಣೆ ಕುರಿತ ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆಯನ್ನು ವಿರೋಧಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.

2002ರ ಜುಲೈ 18ರ ‘ಪ್ರಜಾವಾಣಿ’ಯಲ್ಲಿ ‘ಬ್ಯಾಂಕ್ಸುಸ್ತಿದಾರರ ವಿರುದ್ಧ ಕ್ರಮಕ್ಕೆ ಆಗ್ರಹ’ ಎಂಬ ಸುದ್ದಿ ಪ್ರಕಟವಾಗಿತ್ತು. ಈ ಒತ್ತಾಯವನ್ನು ಮಾಡಿದ್ದು ಕರ್ನಾಟಕ ಬ್ಯಾಂಕ್ಎಂಪ್ಲಾಯೀಸ್ ಫೆಡರೇಷನ್. ಆಗಲೂ ಈ ಯೂನಿಯನ್‌
ಗಳು ‘ಆಸ್ತಿ ಪುನರ್ ನಿರ್ಮಾಣ ಕಂಪನಿ (ARC) ಸ್ಥಾಪನೆಯು ಸುಸ್ತಿದಾರರಿಗೆ ಇನ್ನಷ್ಟು ಪ್ರಯೋಜನಕಾರಿ’ ಎಂದಿದ್ದವು. ಈ ಇಪ್ಪತ್ತೈದು ವರ್ಷಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ಬದಲಾಗಿದೆ. ಕಾರ್ಪೊರೇಟ್‌ ಕಂಪನಿಗಳ ಸಾಲ ಸುಸ್ತಿಯಾ
ಗಲು, ಬಾಹ್ಯ ಕಾರಣಗಳಂತೆ ಅನೇಕ ಸಂದರ್ಭಗಳಲ್ಲಿ ಬ್ಯಾಂಕುಗಳ ಒಳಗಿನ ‘ಸಹಾಯ’ವೂ ಇರುತ್ತದೆ. ನ್ಯಾಯಾಲಯಗಳಲ್ಲಿ ಚಾರ್ಜ್‌ಶೀಟ್ ಆದ ಎಷ್ಟು ಜನರ ಸದಸ್ಯತ್ವವನ್ನು ಈ ಸಂಘಟನೆಗಳು ರದ್ದು ಮಾಡಿವೆ? ತಾವಾಗಿ ಏನೂ ಮಾಡದವರು, ಇತ್ತೀಚೆಗಷ್ಟೇ ಸ್ವಲ್ಪ ಗಂಭೀರವಾಗಿ ನಡೆಯುತ್ತಿರುವ ವಸೂಲಾತಿ ಕ್ರಮಗಳನ್ನು ವಿರೋಧಿಸಿದರೆ ಏನೆನ್ನಬೇಕು?

ಸಾರ್ವಜನಿಕ ಕ್ಷೇತ್ರದ 21 ಬ್ಯಾಂಕುಗಳಲ್ಲಿ 19 ಬ್ಯಾಂಕುಗಳು ನಷ್ಟದಲ್ಲಿವೆ. ಇಂಥ ಸ್ಥಿತಿಯಲ್ಲಿ ‘ಬ್ಯಾಂಕ್‌ ಠೇವಣಿಗಳು ಸುರಕ್ಷಿತ’ ಎಂದು ವಿತ್ತ ಮಂತ್ರಿ ಹೇಳಿರುವುದನ್ನು ಸಾರ್ವಜನಿಕರು ಕಣ್ಣು ಮುಚ್ಚಿ ನಂಬಿಬಿಡಬೇಕೇ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.