ADVERTISEMENT

ಸೃಜನಶೀಲರೆಂದೇನೂ ಭಾವಿಸಬೇಕಿಲ್ಲ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 19:30 IST
Last Updated 1 ಜುಲೈ 2020, 19:30 IST

ರಾಜಕಾರಣಿಗಳ ಲೇಖನ ಪ್ರೀತಿಯ ಬಗ್ಗೆ ರವೀಂದ್ರ ಭಟ್ಟ ಅವರು ಬರೆದಿರುವ ಲೇಖನ (ಪ್ರ.ವಾ., ಜೂನ್ 30) ಓದಿದೆ. ಈ ಬೆಳವಣಿಗೆ ಇಂದು ನಿನ್ನೆಯದಲ್ಲ. ಕೆಲವು ರಾಜಕಾರಣಿಗಳ ಹೆಸರಿನಲ್ಲಿ ಉತ್ತಮ ಲೇಖನಗಳು ಪ್ರಕಟವಾಗಿರುವುದೂ ಉಂಟು. ಸಾಮಾಜಿಕ ಜಾಲತಾಣಗಳು ಹೆಚ್ಚಾದಂತೆ, ಕೆಲವರು ಭಾವಚಿತ್ರ ಸಹಿತ ಅಲ್ಲಿ ಸ್ವಲ್ಪ ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಇವರನ್ನು ಸೃಜನಶೀಲ ಲೇಖಕ ರಾಜಕಾರಣಿಗಳು ಎಂದೇನೂ ಭಾವಿಸಬೇಕಿಲ್ಲ. ಉದಯೋನ್ಮುಖ ಬರಹಗಾರರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕೆಲವು ನಿವೃತ್ತ ಪತ್ರಕರ್ತರು ಈ ರಾಜಕಾರಣಿಗಳ ಸಂಪನ್ಮೂಲ ವ್ಯಕ್ತಿಗಳು. ಅವರಿಂದ ಲೇಖನಗಳನ್ನು ಬರೆಸಿ, ಅರೆಕಾಸು ಮಜ್ಜಿಗೆ ನೀಡಿ ಅವರನ್ನು ತೃಪ್ತಿಪಡಿಸಿ, ಆ ಲೇಖನಕ್ಕೆ ತಮ್ಮ ಹೆಸರನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಾರೆ. ಪತ್ರಿಕೆಗಳಲ್ಲೂ ಪ್ರಕಟಿಸುವಂತೆ ಸಂಪಾದಕರಿಗೆ ದುಂಬಾಲು ಬೀಳುತ್ತಾರೆ. ಆದರೆ ಅವರ ಹಣೆಬರಹ ಸ್ವಕ್ಷೇತ್ರದ ಜನರಿಗೆ ತಿಳಿಯದ ವಿಷಯವೇನಲ್ಲ.

-ಚಿ.ಉಮಾ ಶಂಕರ್, ಲಕ್ಷ್ಮೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT