ADVERTISEMENT

ದೀಪಾವಳಿಗೆ ಉಡುಗೊರೆ ನೀಡುವ ಯೋಜನೆ ಇದೆಯಾ? ಕಡಿಮೆ ಬೆಲೆಗೆ ಇವುಗಳನ್ನು ಕೊಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2025, 7:44 IST
Last Updated 14 ಅಕ್ಟೋಬರ್ 2025, 7:44 IST
<div class="paragraphs"><p>ಎಐ ಚಿತ್ರ</p></div>
   

ಎಐ ಚಿತ್ರ

ದೀಪಾವಳಿ ಬಂತೆಂದರೆ ಎಲ್ಲರ ಮನೆಯಲ್ಲಿ ಸಂಭ್ರಮ ಜೋರಾಗಿರುತ್ತದೆ. ಬಹುತೇಕರು ದೀಪಾವಳಿ ಹಬ್ಬಕ್ಕೆ ತಮ್ಮ ಪ್ರೀತಿಪಾತ್ರರಿಗೆ, ಸ್ನೇಹಿತರಿಗೆ ಹಾಗೂ ಆತ್ಮೀಯರಿಗೆ ವಿಶೇಷ ಉಡುಗೊರೆಗಳನ್ನು ನೀಡಲು ಬಯಸುತ್ತಾರೆ. ಪರಸ್ಪರ ಉಡುಗೊರೆ ನೀಡುವ ಮೂಲಕ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.

ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಆತ್ಮೀಯರು ಪರಸ್ಪರ ಮನೆಗೆ ತೆರಳಿ ಶುಭಾಶಯ ಕೋರುತ್ತಾರೆ. ಜೊತೆಗೆ ವಿಶೇಷವಾಗಿ ಉಡುಗೊರೆಗಳನ್ನು ನೀಡುತ್ತಾರೆ. ಇದು ಸಾಮಾಜಿಕ ಮತ್ತು ಕೌಟುಂಬಿಕ ಬಂಧವನ್ನು ಗಟ್ಟಿಯಾಗುವಂತೆ ಮಾಡುತ್ತದೆ. ದೀಪಾವಳಿಯಂದು ಕುಟುಂಬಸ್ಥರು ಸ್ನೇಹಿತರೊಂದಿಗೆ ಸೇರಿಕೊಂಡು ಸಿಹಿ ಹಂಚಿ, ಪಟಾಕಿ ಸಿಡಿಸಿ ಪರಸ್ಪರ ಶುಭಾಶಯ ಕೋರುತ್ತಾರೆ. ಹಾಗೇ ಸಾಕಷ್ಟು ಮಂದಿ ದೀಪಾವಳಿಯಲ್ಲಿ ಬಂಧುಗಳಿಗೆ, ಸ್ನೇಹಿತರಿಗೆ ಅಥವಾ ಆತ್ಮೀಯರಿಗೆ ಉಡುಗೊರೆ ನೀಡಲು ಬಯಸುತ್ತಾ ಇರುತ್ತಾರೆ. ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ನಿಮ್ಮ ಪ್ರೀತಿ ಪಾತ್ರರಿಗೆ ಕಡಿಮೆ ಬೆಲೆಯಲ್ಲಿ ಸಿಗುವ ಈ ರೀತಿಯ ಉಡುಗೊರೆಗಳನ್ನು ಸಹ ನೀಡಬಹುದು.

ADVERTISEMENT
ದೀಪಾವಳಿ ಹಬ್ಬಕ್ಕೆ ಈ ರೀತಿಯ ಉಡುಗೊರೆಗಳನ್ನು​ ನೀಡಬಹುದು

ಪ್ರಜಾವಾಣಿ ಚಿತ್ರ

ದೀಪಗಳು ಅಥವಾ ಮೇಣದ ಬತ್ತಿಗಳು

ಬೆಳಕಿನ ಹಬ್ಬ ದೀಪಾವಳಿಯಲ್ಲಿ ಜನರು ತಮ್ಮ ಮನೆಯನ್ನು ದೀಪಗಳು ಹಾಗೂ ಮೇಣದಬತ್ತಿ ಹಚ್ಚಿ ಬೆಳಗುತ್ತಾರೆ. ಈ ವಿಶೇಷವಾದ ಹಬ್ಬದಂದು ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ದೀಪಗಳು ಅಥವಾ ಮೇಣದ ಬತ್ತಿಗಳನ್ನು ಉಡುಗೊರೆಯಾಗಿ ಕೊಡಬಹುದು. ಇದು ಮನೆಯ ಅಲಂಕಾರಕ್ಕೂ ಸೂಕ್ತವಾಗಿವೆ. ನೀವೇನಾದರೂ ದೀಪಗಳು ಅಥವಾ ಪರಿಮಳಯುಕ್ತ ಮೇಣದಬತ್ತಿಗಳು ಉಡುಗೊರೆಯಾಗಿ ನೀಡಿದರೆ ಮನೆಯ ಅಂದವನ್ನು ಹೆಚ್ಚಿಸುತ್ತವೆ. ದೀಪಗಳನ್ನು ದೀಪಾವಳಿಗೆ ಉಡುಗೊರೆಯಾಗಿ ಕೊಡುವುದು ಅತ್ಯುತ್ತಮ ಆಯ್ಕೆಯಾಗಿದೆ. ಇನ್ನು, ಲ್ಯಾಂಪ್‌ಗಳು ಆನ್‌ಲೈನ್‌ನಲ್ಲಿ ಹಾಗೂ ಮಾರುಕಟ್ಟೆಯಲ್ಲಿ ವಿವಿಧ ಗಾತ್ರಗಳಲ್ಲಿ ಲಭ್ಯವಿದೆ.

ಒಣ ಹಣ್ಣುಗಳು ಮತ್ತು ಸಿಹಿತಿಂಡಿಗಳು

ದೀಪಗಳು ಅಥವಾ ಮೇಣದ ಬತ್ತಿಗಳನ್ನು ಬಿಟ್ಟು ನೀವೇನಾದರೂ ಬೇರೆ ನೀಡಲು ಬಯಸಿದರೆ ಒಣ ಹಣ್ಣುಗಳು (ಡ್ರೈ ಫ್ರೂಟ್ಸ್) ಮತ್ತು ಸಿಹಿತಿಂಡಿಗಳನ್ನು ನೀಡಬಹುದು. ಒಣ ಹಣ್ಣುಗಳನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆ. ಒಣ ಹಣ್ಣುಗಳು ಆರೋಗ್ಯ ತುಂಬಾ ಒಳ್ಳೆಯದು. ಜೊತೆಗೆ ಅವುಗಳನ್ನು ದೀರ್ಘಕಾಲದವರೆಗೆ ಬಳಸಬಹುದು. ಇತ್ತೀಚಿನ ದಿನಗಳಲ್ಲಿ ಡ್ರೈ ಫ್ರೂಟ್ಸ್​ ಜೊತೆಗೆ ವಿಧ ವಿಧದ ಚಾಕೊಲೇಟ್‌ಗಳನ್ನು ನೀಡಬಹುದು.

ಹೂವಿನ ಕುಂಡ ಅಥವಾ ಹೂಗುಚ್ಛ

ದೀಪಾವಳಿ ಹಬ್ಬಕ್ಕೆ ಹೂವಿನ ಕುಂಡ ಅಥವಾ ಹೂಗುಚ್ಛವನ್ನು ಉಡುಗೊರೆಯಾಗಿ ಕೊಡಬಹುದು. ಇದು ನೋಡಲು ಚೆನ್ನಾಗಿ ಕಾಣುತ್ತದೆ. ಜೊತೆಗೆ ಮನೆಗೆ ಒಂದು ಕಳೆ ತರುತ್ತದೆ. ಇನ್ನು, ‌ಪರಿಸರ ಸ್ನೇಹಿ ವಸ್ತುಗಳು ಎಲ್ಲರಿಗೂ ಇಷ್ಟವಾಗುತ್ತವೆ. ಬಿದಿರಿನ ಗಿಡಗಳು, ಪುಟ್ಟ ಮಡಿಕೆಗಳು, ಮರದ ಗೊಂಬೆಗಳು ಸಣ್ಣ ಅಲಂಕಾರಿಕ ಸಸ್ಯಗಳನ್ನು ಉಡುಗೊರೆಯಾಗಿ ನೀಡಬಹುದು. ಈ ಮೂಲಕ ಪರಿಸರ ಸ್ನೇಹಿ ಉಡುಗೊರೆಯಾಗಿ ಬೆಳಕಿನ ಹಬ್ಬವನ್ನು ಆಚರಿಸಬಹುದು.

ಎಲೆಕ್ಟ್ರಾನಿಕ್ ಉಪಕರಣಗಳು

ವಿದ್ಯುತ್ ಉಪಕರಣಗಳನ್ನೂ (ಎಲೆಕ್ಟ್ರಾನಿಕ್ ವಸ್ತು) ಸಹ ಉಡುಗೊರೆಯಾಗಿ ಕೊಡಬಹುದು. ಆನ್‌ಲೈನ್ ಗಡಿಯಾರ, ಮಿಕ್ಸರ್, ಟೋಸ್ಟರ್ ಗ್ರಿಲರ್, ಇಯರ್ ಫೋನ್, ಸ್ಪೀಕರ್ ಸೇರಿದಂತೆ ಅನೇಕ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಅಷ್ಟೇ ಅಲ್ಲದೇ ಅಡುಗೆ ಮನೆಯಲ್ಲಿ ಬಳಸುವ ಸಾಮಾನುಗಳನ್ನು ಕೂಡ ಉಡುಗೊರೆಯಾಗಿ ನೀಡಬಹುದು. ಕಿಚನ್ ಸೆಟ್ ಮತ್ತು ಮನೆ ಬಳಕೆಗೆ ಉಪಯುಕ್ತವಾಗುವಂತಹ ಇಂಡಕ್ಷನ್ ಕುಕ್ಕರ್, ಪ್ರೆಶರ್ ಕುಕ್ಕರ್, ಕಡಾಯಿ, ಪ್ಯಾನ್, ಗ್ಲಾಸ್ ಅಥವಾ ಕಪ್‌, ಚಮಕ ಸೇರಿದಂತೆ ಸಾಕಷ್ಟು ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು.

ಪ್ರಜಾವಾಣಿ ಚಿತ್ರ

ಮನೆಯಲ್ಲಿ ತಯಾರಿಸಿದ ವಸ್ತುಗಳು

ಇದು ದೀಪಾವಳಿ ಹಬ್ಬಕ್ಕೆ ವಿಶೇಷವಾಗಿ ಗಿಫ್ಟ್‌ ರೀತಿಯಲ್ಲಿ ಕೊಡಬಹುದು. ಮನೆಯಲ್ಲಿ ಮಣಿಗಳಿಂದ ತಯಾರಿಸಿದ ಬ್ರಾಸ್ಲೈಟ್, ಕತ್ತಿಗೆ ಸರ, ಕಿವಿ ಓಲೆ, ಬಳೆ ಹೀಗೆ ನಾನಾ ರೀತಿಯ ವಸ್ತುಗಳನ್ನು ದೀಪಾವಳಿ ಹಬ್ಬಕ್ಕೆ ಉಡುಗೊರೆಯಾಗಿ ಕೊಡಬಹುದು. ಮುಖ್ಯವಾಗಿ ಇವುಗಳು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಇಷ್ಟವಾಗುತ್ತದೆ.

ಈ ಮೇಲೆ ತಿಳಿಸಲಾದ ವಿಶೇಷವಾದ ಉಡುಗೊರೆಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ಕೊಟ್ಟು ಬೆಳಕಿನ ಹಬ್ಬ ದೀಪಾವಳಿಯನ್ನು ಮತ್ತಷ್ಟು ಖುಷಿಯಿಂದ ಆಚರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.