ADVERTISEMENT

ಮೊದಲ ಓದು: ಹೊಸ ಹೊಳಹಿನ ಒಳನೋಟಗಳು

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 1:30 IST
Last Updated 29 ಜೂನ್ 2025, 1:30 IST
   

ಜೈನ ಧರ್ಮ 63 ಒಳನೋಟಗಳು

  • ಲೇ: ದೇವದತ್ತ ಪಟ್ಟನಾಯಕ

  • ಕನ್ನಡಕ್ಕೆ: ಪದ್ಮರಾಜ ದಂಡಾವತಿ

    ADVERTISEMENT
  • ಪ್ರ: ಅರವಿಂದ ಇಂಡಿಯಾ

  • ಸಂ: 9886296550

ಜೈನ ಧರ್ಮದ ಒಳಹೊಳಹುಗಳನ್ನು ಭಾರತೀಯ ಇತಿಹಾಸ, ಪುರಾಣ, ಮಹಾಕಾವ್ಯಗಳೊಂದಿಗೆ ಸರಳವಾಗಿ ವಿವರಿಸಲಾಗಿದೆ. ಜೈನ ಧರ್ಮವೆಂದರೆ ಅಹಿಂಸೆಯನ್ನು ಪ್ರತಿಪಾದಿಸಿದ ಧರ್ಮ. ಎರಡು ಪಂಗಡಗಳು ಎಂದು ತಿಳಿದವರಿಗೆ ಈ ಪುಸ್ತಕದಿಂದ ಇನ್ನಷ್ಟು ಮಾಹಿತಿ ಸರಳವಾಗಿ ಪ್ರಾಪ್ತವಾಗುತ್ತದೆ. ತೇರಾಪಂಥಿ, ಬೀಸ್‌ ಪಂಥಿಗಳು ಅದ್ಹೇಗೆ ದಿಗಂಬರ ಪಂಗಡದಲ್ಲಿಯೇ ಕವಲು ಒಡೆದಿವೆ? ಜೈನ ಮಹಾಭಾರತ ಏನು ಹೇಳುತ್ತದೆ? ಇದು ಮೂಲ ಭಾರತದ ಕತೆಯಿಂದ ಹೇಗೆ ಭಿನ್ನವಾಗಿದೆ? ಜೈನ ರಾಮಾಯಣದ ಸ್ವರೂಪ ಹೇಗಿದೆ? ಇದರಲ್ಲಿರುವ ಭಿನ್ನ ಕತೆಗಳೇನು? ಸಂಕ್ಷಿಪ್ತವಾಗಿ ವಿವರಿಸುತ್ತಲೇ ಜೈನ ಧರ್ಮದ ಒಳ ಮರ್ಮಗಳನ್ನು ಹೇಳುತ್ತವೆ. ಆರ್ಯರು, ಶಕರು, ಮುಂತಾದ ಒಳ ಪಂಗಡಗಳನ್ನು ವಿವರಿಸುತ್ತಲೇ  ಜೈನ ಧರ್ಮದ ಒಳನೋಟಗಳನ್ನು ಒದಗಿಸಿಕೊಡುತ್ತದೆ. 

ದೇವದತ್ತ ಪಟ್ಟನಾಯಕ ಅವರು ಎಂದಿನಂತೆ ಕತೆ ಹೇಳುವ ಶೈಲಿಯಲ್ಲಿಯೇ ಮಾಹಿತಿಯನ್ನು ನಿರೂಪಿಸುತ್ತ ಹೋಗಿದ್ದಾರೆ. ಕತೆ, ಕಾವ್ಯ, ಪುರಾಣ ಮತ್ತು ಜನಪದ ಎಲ್ಲವನ್ನೂ ಸಮ್ಮಿಳಿಸುತ್ತಲೇ ಚರಿತ್ರೆಯನ್ನೂ ಆಸಕ್ತಿಕರ ಮಾಡಬಹುದು ಎಂಬಂಥ ಅವರ ಶೈಲಿ ಕನ್ನಡದಲ್ಲಿಯೂ ಸಹಜವಾಗಿಯೇ ಒಡಮೂಡಿದೆ. ಎಲ್ಲಿಯೂ ಅನುವಾದ ಓದುತ್ತಿರುವ ಅನುಭವ ಆಗುವುದಿಲ್ಲ. ಚಿತ್ರಗಳು ಗಮನ ಸೆಳೆಯುತ್ತವೆ. ಓದುಗರ ಆಸಕ್ತಿಯನ್ನು ಹಿಡಿದಿಡುತ್ತವೆ. ‍ಪುಸ್ತಕ ಆರಂಭಿಸುವುದಷ್ಟೇ ಓದುಗನ ಕೆಲಸ. ಭಾಷೆ, ಶೈಲಿ ಮತ್ತು ಮಾಹಿತಿ, ಅನುವಾದಕರ ನಿರೂಪಣೆ ಪುಸ್ತಕ ಬಿಡದಂತೆ ಮುಗಿಸಿಕೊಳ್ಳುತ್ತದೆ. ಓದುವುದು ಮುಗಿದ ನಂತರ ಇನ್ನೆಷ್ಟು ಉಳಿಯಿತು, ಓದುವುದು, ತಿಳಿಯುವುದು ಎಂಬ ಕುತೂಹಲವನ್ನೂ ಉಳಿಸುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.