ADVERTISEMENT

ಹುಣಸೆ ಹಣ್ಣು ಯಾವ ದೇಶದ್ದು, ಭಾರತಕ್ಕೆ ಬಂದಿದ್ದು ಹೇಗೆ? ಇಲ್ಲಿದೆ ಮಾಹಿತಿ

ಡೆಕ್ಕನ್ ಹೆರಾಲ್ಡ್
Published 29 ಅಕ್ಟೋಬರ್ 2025, 12:41 IST
Last Updated 29 ಅಕ್ಟೋಬರ್ 2025, 12:41 IST
<div class="paragraphs"><p>ಪ್ರಜಾವಾಣಿ ಚಿತ್ರ</p></div>

ಪ್ರಜಾವಾಣಿ ಚಿತ್ರ

   

ಭಾರತದ ಬಹುತೇಕ ಅಡುಗೆ ಮನೆಗಳಲ್ಲಿ ಹುಣಸೆ ಹಣ್ಣು ಇರುವುದನ್ನು ನೋಡಬಹುದು. ಹುಣಸೆ ಹಣ್ಣು ಭಾರತೀಯ ನೆಲದಲ್ಲಿ ಬೆಳೆದಿದ್ದು ಎಂದು ಹೇಳಿದರೂ, ಇದು ಆಫ್ರಿಕಾಗೆ ಸೇರಿದ್ದು ಎಂದು ಸಂಶೋಧಕರು ಹೇಳುತ್ತಾರೆ. ಈ ಹೆಸರು ವೊಲೊಫ್ ಭಾಷೆ ಡಖರ್ ಪದದಿಂದ ಬಂದಿದೆ. ವೊಲೊಫ್ (Wolof language) ಭಾಷೆಯಲ್ಲಿ ಡಖರ್ ಎಂದರೆ ಹುಣಸೆ ಹಣ್ಣು ಎಂಬ ಅರ್ಥ ನೀಡುತ್ತದೆ.

ಅರಬ್ ವ್ಯಾಪಾರಿಗಳು ಹುಣಸೆ ಹಣ್ಣನ್ನು ಖರ್ಜೂರವೆಂದು ಭಾವಿಸಿ ಭಾರತೀಯ ಖರ್ಜೂರ ಎಂದು ಕರೆದರು. ತಮರ್-ಅಲ್-ಹಿಂದ್, ಅಕಾ ತಮರ್-ಇ-ಹಿಂದ್ ಎಂತಲೂ ಹುಣಸೆಗೆ ಹೆಸರಿಟ್ಟು, ಪ್ರಪಂಚದ ನಾನಾ ಭಾಗಗಳಿಗೆ ಕೊಂಡೊಯ್ದರು. ಹುಣಸೆ ಮರವು ಸಾವಿರಾರು ವರ್ಷಗಳ ಹಿಂದೆ ನೈಸರ್ಗಿಕವಾಗಿ ಬೆಳೆದ ಮರ ಎಂದು ಭಾರತೀಯ ಪ್ರಾಚೀನ ಗ್ರಂಥವಾದ ‘ಬ್ರಹ್ಮ ಸಂಹಿತ’ ಯಲ್ಲಿ ಹೇಳಲಾಗಿದೆ.

ADVERTISEMENT

ಹುಣಸೆ ಮರವು ಆಫ್ರಿಕಾದ ಮೂಲ ಮರವಾಗಿದ್ದು ಅಲ್ಲಿಂದ ಭಾರತ ಹಾಗೂ ಪ್ರಪಂಚದ ಉಳಿದ ಭಾಗಗಳಿಗೆ ಬಂದಿತು ಎಂದು ಸಸ್ಯಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. 'ಬೆಚ್ಚಗಿನ ಹವಾಮಾನದ ಹಣ್ಣುಗಳು' ಎಂಬ ಪುಸ್ತಕ ಬರೆದಿರುವ ಸಸ್ಯಶಾಸ್ತ್ರಜ್ಞೆ ಜೂಲಿಯಾ ಎಫ್ ಮಾರ್ಟನ್ ಅವರು ಹೇಳುವಂತೆ ‘ಬಹಳ ಹಿಂದೆಯೇ ಭಾರತದಲ್ಲಿ ಹುಣಸೆ ಮರವು ಚಿರಪರಿಚಿತವಾಗಿತ್ತು.’ ಎಂದು ಉಲ್ಲೇಖಿಸಿದ್ದಾರೆ.

ಭಾರತಕ್ಕೆ ಹುಣಸೆ ಹಣ್ಣನ್ನು ಯಾರು ತಂದರು ಎಂಬುದರ ಹೊರತಾಗಿ, ದೇಶದ ಪಾಕ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಭಾರತದ ವಿವಿಧ ಆಹಾರ ಪದಾರ್ಥಗಳಾದ ಚಟ್ನಿ , ಚಾಟ್ಸ್‌ಗಳು, ಸಮೋಸಾ, ಪುಳಿಯೊಗರೆ, ಸಾಂಬಾರ್‌ ಹಾಗೂ ವಿವಿಧ ಖಾದ್ಯಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ. 

ಅಷ್ಟೇ ಅಲ್ಲದೆ ಹುಣಸೆಯು ಆಗ್ನೇಯ ಏಷ್ಯಾದ ಪಾಕ ಪದ್ಧತಿಯಲ್ಲೂ ಸ್ಥಾನ ಪಡೆದಿದೆ.  ಉದಾಹರಣೆಗೆ ವಿವಿಧ ಬಗೆಯ ಸಾಸ್‌ಗಳಲ್ಲಿ ಹುಣಸೆಯನ್ನು ಸೇರಿಸಲಾಗುತ್ತದೆ. ಇಂಗ್ಲೆಂಡ್‌ನ ವೋರ್ಸೆಸ್ಟರ್‌ಶೈರ್ ಸಾಸ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಹುಣಸೆ ಹಣ್ಣಿನ ಪೇಸ್ಟ್‌ ಕೂಡಾ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.