
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ; ಎಐ
ದೇಶದ ವಿವಿಧ ವಲಯಗಳಲ್ಲಿ ಹಲವು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ದೇಶಕ್ಕೆ ಅಗತ್ಯವಿರುವ ವಸ್ತುಗಳನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಹಾಗಾದರೆ ಭಾರತದ ಪ್ರಮುಖ ಕಂಪನಿಗಳು ಹಾಗೂ ಆ ಕಂಪನಿಯ ವಿಸ್ತೃತ ರೂಪಗಳ ಪಟ್ಟಿ ಇಲ್ಲಿದೆ.
MRF: ಮದ್ರಾಸ್ ರಬ್ಬರ್ ಫ್ಯಾಕ್ಟರಿ
ಭಾರತದ ಅತಿದೊಡ್ಡ ಹಾಗೂ ವಿಶ್ವದ ಪ್ರಮುಖ ಟೈರ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿದೆ. ಈ ಕಂಪನಿಯು 1946ರಲ್ಲಿ ಚೆನ್ನೈನಲ್ಲಿ ಸ್ಥಾಪನೆಯಾಯಿತು. ಕಾರುಗಳಿಂದ ಹಿಡಿದು ವಿಮಾನದವರೆಗೆ ಟೈರ್‌ಗಳನ್ನು ಉತ್ಪಾದಿಸುತ್ತದೆ.
PVR: ಪ್ರಿಯಾ ವಿಲೇಜ್ ರೋಡ್‌ಶೋ
ಅಜಯ್ ಬಿಜ್ಲಿ ಅವರ ‘ಪ್ರಿಯಾ ಎಕ್ಸಿಬಿಟರ್ಸ್ ಪ್ರೈವೇಟ್ ಲಿಮಿಟೆಡ್’ ಹಾಗೂ ಆಸ್ಟ್ರೇಲಿಯಾದ ಮೂಲದ ‘ವಿಲೇಜ್ ರೋಡ್‌ಶೋ’ ನಡುವಿನ ಜಂಟಿಯಾಗಿ 1997ರಲ್ಲಿ ಈ ಕಂಪನಿ ಆರಂಭವಾಯಿತು. ಭಾರತದಲ್ಲಿ ಮಲ್ಟಿಪ್ಲೆಕ್ಸ್ ಪರಿಕಲ್ಪನೆ ಪರಿಚಯಿಸಿದ ಮೊದಲ ಕಂಪನಿಯಾಗಿದೆ.
ITC: ಇಂಡಿಯನ್ ಟೊಬ್ಯಾಕೊ ಕಂಪನಿ
ದೇಶದ ಪ್ರಮುಖ ಬಹುರಾಷ್ಟ್ರೀಯ ಕಂಪನಿಯಾಗಿ ಗುರುತಿಸಿಕೊಂಡಿರುವ ಇಂಡಿಯನ್ ಟೊಬ್ಯಾಕೊ ಕಂಪನಿ 1910ರಲ್ಲಿ ಕೋಲ್ಕತ್ತಾದಲ್ಲಿ ಆರಂಭವಾಯಿತು. ಕಾಗದದ ಬೋರ್ಡ್, ಕೃಷಿ-ವ್ಯವಹಾರ ಮತ್ತು ಐಟಿ ಕ್ಷೇತ್ರಗಳಲ್ಲಿ ವ್ಯವಹಾರಗಳನ್ನು ನಡೆಸುತ್ತಿದೆ. ಭಾರತದ ಸಿಗರೇಟ್ ಮಾರುಕಟ್ಟೆಯ ನಾಯಕನಾಗಿದೆ.
DLF: ಡೆಲ್ಲಿ ಲ್ಯಾಂಡ್ ಅಂಡ್ ಫೈನಾನ್ಸ್
ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಡೆಲ್ಲಿ ಲ್ಯಾಂಡ್ ಅಂಡ್ ಫೈನಾನ್ಸ್ ಒಂದಾಗಿದೆ. 1946 ರಲ್ಲಿ ಚೌಧರಿ ರಾಘವೇಂದ್ರ ಸಿಂಗ್ ಈ ಕಂಪನಿಯನ್ನು ಸ್ಥಾಪಿಸಿದರು.
UPL: ಯುನೈಟೆಡ್ ಫಾಸ್ಪರಸ್ ಲಿಮಿಟೆಡ್
ಮುಂಬೈ ಮೂಲದ ವಿಶ್ವದ ಪ್ರಮುಖ ಕೃಷಿ ರಾಸಾಯನಿಕ ಕಂಪನಿಯಾಗಿದೆ. 1969 ರಲ್ಲಿ ಈ ಕಂಪನಿ ಸ್ಥಾಪನೆಯಾಯಿತು. ಕೀಟನಾಶಕ, ಶಿಲೀಂಧ್ರನಾಶ, ಸಸ್ಯನಾಶಕ ಮತ್ತು ಬೀಜಗಳನ್ನು ತಯಾರಿಸುವ 5ನೇ ಜಾಗತಿಕ ಜೆನೆರಿಕ್ ಅಗ್ರೋಕೆಮಿಕಲ್ ಸಂಸ್ಥೆಯಾಗಿದೆ.
HCL: ಹಿಂದೂಸ್ತಾನ್ ಕಂಪ್ಯೂಟರ್ಸ್ ಲಿಮಿಟೆಡ್
ಈ ಕಂಪನಿಯ ಕೇಂದ್ರ ಕಚೇರಿ ಉತ್ತರ ಪ್ರದೇಶದ ನೋಯ್ಡಾದಲ್ಲಿದೆ. 1991ರಲ್ಲಿ ಶಿವ ನಾಡರ್ ಎಂಬುವವರು ಈ ಕಂಪನಿಯನ್ನು ಕಟ್ಟಿದರು. ಭಾರತದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಲಹಾ ಕಂಪನಿಯಾಗಿದೆ. ಕಂಪನಿ 60 ದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ.
AMUL: ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್
1946 ರಲ್ಲಿ ಗುಜರಾತ್‌ನ ಆನಂದ್‌ನಲ್ಲಿ ಸ್ಥಾಪಿತವಾದ ಭಾರತದ ಅತಿದೊಡ್ಡ ಡೈರಿ ಸಹಕಾರಿ ಸಂಸ್ಥೆಯಾಗಿದೆ. ಡಾ. ವರ್ಗೀಸ್ ಕುರಿಯನ್ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಸ್ಥಾಪನೆಯಾಯಿತು. ಇದು ದೇಶದಲ್ಲಿ ಬಿಳಿ ಕ್ರಾಂತಿಗೆ ಕಾರಣವಾಯಿತು.
Paytm: ಪೇ ಗ್ರೂ ಮೊಬೈಲ್
ಮೊಬೈಲ್ ಮೂಲಕ ಹಣಕಾಸು ವರ್ಗಾವಣೆ, ಮೊಬೈಲ್ ರೀಚಾರ್ಜ್ ಮತ್ತು ಬಿಲ್ ಪಾವತಿಗಳನ್ನು ಸುಲಭವಾಗಿ ಮಾಡಿದ ಆ್ಯಪ್ ಆಗಿದೆ. ಇದು ವೇಗದ, ಸುರಕ್ಷಿತ ಸೇವೆಗಳನ್ನು ಒದಗಿಸುವ ಮೂಲಕ ಜನರ ಮನ್ನಣೆ ಗಳಿಸಿದೆ. ವಿದೇಶದಲ್ಲಿಯೂ ಬಳಕೆಯಾಗುತ್ತದೆ.
Wipro: ವೆಸ್ಟರ್ಸ್ ಇಂಡಿಯಾ ಪಾಮ್ ರಿಫೈರ್ನ್ ಆಯಿಲ್
1945 ರಲ್ಲಿ ಮಹಮ್ಮದ್ ಹುಸೇನ್ ಹಾಶಮ್ ಎಂಬುವವರು ಈ ಕಂಪನಿಯನ್ನು ಸ್ಥಾಪಿಸಿದರು. ಆರಂಭದಲ್ಲಿ ಈ ಕಂಪನಿ ತರಕಾರಿ ಮತ್ತು ಎಣ್ಣೆಗಳನ್ನು ತಯಾರಿಸುವ ಕಂಪನಿಯಾಗಿತ್ತು. ಇದೀಗ ಮಾಹಿತಿ ತಂತ್ರಜ್ಞಾನ, ಕನ್ಸಲ್ಟಿಂಗ್ ಮತ್ತು ವ್ಯವಹಾರ ಪ್ರಕ್ರಿಯೆ ಸೇವೆಗಳನ್ನು ನೀಡುವ ಜಾಗತಿಕ ಸಂಸ್ಥೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.