ADVERTISEMENT

ಬಾಬು ಜಗಜೀವನ ರಾಂ ವಸತಿ ರಹಿತ ಶೆಡ್‌ ನಿರ್ಮಾಣ ಯೋಜನೆ; ಪಡೆಯುವುದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2025, 6:12 IST
Last Updated 21 ಅಕ್ಟೋಬರ್ 2025, 6:12 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಡಾ. ಬಾಬು ಜಗಜೀವನ್ ರಾಂ ವಸತಿ ರಹಿತ ಶೆಡ್‌ ನಿರ್ಮಾಣ ಯೋಜನೆಯೂ ಒಂದು. ಈ ಯೋಜನೆಯನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ಅನುಷ್ಠಾನಗೊಳಿಸುತ್ತದೆ. ಇದರಲ್ಲಿ ಮನೆ ರಹಿತ ಕುಶಲಕರ್ಮಿಗಳಿಗೆ ಶೆಡ್‌ ನಿರ್ಮಾಣಕ್ಕೆ ಸಹಾಯಧನ  ಸಿಗಲಿದೆ. ಈ ಯೋಜನೆಯನ್ನು ಪಡೆಯುವುದು  ಹೇಗೆ? ದೊರೆಯುವ ಸಹಾಯಧನ ಎಷ್ಟು? ಎಂಬ ಮಾಹಿತಿ ತಿಳಿಯೋಣ.

ಸಿಗಲಿರುವ ಸಹಾಯಧನವೆಷ್ಟು?

ADVERTISEMENT
  • ಕಟ್ಟಡ ನಿರ್ಮಾಣಕ್ಕೆ – ₹2.50 ಲಕ್ಷ  ಸಿಗಲಿದೆ.

  • ಒಟ್ಟು ಮೊತ್ತದಲ್ಲಿ ಸರ್ಕಾರದಿಂದ – ₹2.20 ಲಕ್ಷ ಸಹಾಯಧನ ಸಿಗಲಿದೆ.

ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆಗಳೇನು?

  • ಚರ್ಮದ ಕುಶಲಕರ್ಮಿಗಳಾಗಿರಬೇಕು.

  • ಉಪಜಾತಿಗಳಾದ ಅರುಂದತಿಯಾರ್, ಚಮ್ಮಡಿಯ, ಚಮ್ಮಾರ್, ಚಂಬರ್, ಚಮಗರ್, ಮಾದರ, ಮಾದಿಗ, ಮಾದಿಗ, ಮಿನಿ ಮಾದಿಗ, ಜಾಂಬವಲು, ಹರಳಯ್ಯ, ಮಾಚಿಗರ್, ಮೋಚಿಗಾರ. ಮೋಚಿ, ಮುಚಿ, ತೆಲುಗು ಮೋಚಿ, ಕಾಮತಿ ಮೋಚ, ರೋಹಿದಾಸ್, ಧೋರ್, ಕಕ್ಕಯ್ಯ ಹಾಗೂ ಪರಿಶಿಷ್ಟ ಜಾತಿಗಳಲ್ಲಿ ಆದಿ ಕರ್ನಾಟಕ ವರ್ಗಕ್ಕೆ ಸೇರಿದವರಾಗಿರಬೇಕು.

  • ಅರ್ಜಿದಾರನಿಗೆ ಕನಿಷ್ಠ 18 ವರ್ಷ ಪೂರ್ಣವಾಗಿರಬೇಕು.

  • ಫಲಾನುಭವಿಯ ವಾರ್ಷಿಕ ಆದಾಯ, ಗ್ರಾಮೀಣ ಪ್ರದೇಶವಾದರೇ ₹32,000 ಹಾಗೂ ನಗರ ಪ್ರದೇಶವಾದರೇ ₹87,600 ಮೀರಬಾರದು.

  • ಕುಟುಂಬ ಸದಸ್ಯರು ಸಂಬಂಧಿತ ಯೋಜನೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಯೋಜನೆಯನ್ನು ಪಡೆದಿರಬಾರದು. 

  • ಅರ್ಜಿದಾರರ ಕುಟುಂಬಸ್ಥರು ಸರ್ಕಾರಿ ಉದ್ಯೋಗದಲ್ಲಿ ಇರಬಾರದು.

ಅಗತ್ಯ ದಾಖಲೆಗಳು ಯಾವುವು? 

  • ಜಾತಿ ಪ್ರಮಾಣಪತ್ರ

  • ಅರ್ಜಿದಾರ ಹಾಗೂ ಸಂಗಾತಿಯ ಪಾಸ್‌ಪೋರ್ಟ್ ಪೋಟೊ

  • ಆಧಾರ್ ಕಾರ್ಡ್

  • ಪಡಿತರ ಚೀಟಿ

  • ಆದಾಯ ಪ್ರಮಾಣಪತ್ರ

  • ಸೈಟ್ ಖಾತಾ ಪ್ರಮಾಣಪತ್ರ

  • ಇ-ಶ್ರಮ್ ಕಾರ್ಡ್

  • ನಿಗಮದ ತಾಂತ್ರಿಕ ವಿಭಾಗದಿಂದ ಪಡೆದ ಕೌಶಲ್ಯ ಪ್ರಮಾಣಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು.

  • ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿ. https://sevasindhu.karnataka.gov.in/Sevasindhu/English

  • ಹೊಸ ಬಳಕೆದಾರರಾದರೇ ಆಧಾರ್‌ ಸಂಖ್ಯೆ ಹಾಕಿ ನೋಂದಣಿ ಮಾಡಿಕೊಳ್ಳಿ.

  • ನಂತರ ಡಿಜಿಲಾಕರ್ ಖಾತೆಯನ್ನು ರಚಿಸಿಕೊಂಡು ನೋಂದಣಿಯಾಗಿ.  

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? 

  • ಸೇವಾ ಸಿಂಧು ಜಾಲತಾಣದಲ್ಲಿ ‘ಇಲಾಖೆ ಮತ್ತು ಸೇವೆಗಳು’ ಎಂಬ ಆಯ್ಕೆ ಆರಿಸಿ.

  • ನಂತರ ’ಸಮಾಜ ಕಲ್ಯಾಣ ಇಲಾಖೆ’ ಎಂಬ ವಿಭಾಗ ಆಯ್ಕೆ ಮಾಡಿಕೊಂಡು ‘ಡಾ. ಬಾಬು ಜಗಜೀವನ್ ರಾಮ್’ ಲಿವಿಂಗ್ ಕಮ್ ವರ್ಕ್ ಶೆಡ್ ನಿರ್ಮಾಣ ಯೋಜನೆ’ ಆಯ್ಕೆ ಮಾಡಿರಿ.

  • ಬಳಿಕ ‘ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ’ ಕ್ಲಿಕ್ ಮಾಡಿ, ಮೊಬೈಲ್ ಸಂಖ್ಯೆಯಿಂದ ನೋಂದಣಿ ಮಾಡಿಕೊಳ್ಳಿ. 

  • ಅರ್ಜಿಯಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.