ADVERTISEMENT

'ಪ್ರಸೂತಿ ಆರೈಕೆ' ಯೋಜನೆ: ₹3000 ವರೆಗೆ ಆರ್ಥಿಕ ನೆರವು ಪಡೆಯುವುದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2025, 11:30 IST
Last Updated 19 ಡಿಸೆಂಬರ್ 2025, 11:30 IST
<div class="paragraphs"><p>ಗರ್ಭಿಣಿ</p></div>

ಗರ್ಭಿಣಿ

   
ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ 'ಪ್ರಸೂತಿ ಆರೈಕೆ' ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಬಿಪಿಎಲ್, ಪರಿಶಿಷ್ಟ ಜಾತಿ ಮತ್ತು ಪಂಗಡದ ಗರ್ಭಿಣಿಯರಿಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡರೆ ಸಾಮಾನ್ಯ ವರ್ಗದ ಮಹಿಳೆಯರಿಗೆ ₹2,000 ಹಾಗೂ ಎಸ್‌ಸಿ, ಎಸ್‌ಟಿ ವರ್ಗದ ಮಹಿಳೆಯರಿಗೆ ₹3000 ನೀಡಲಾಗುತ್ತದೆ.

ಏನಿದು 'ಪ್ರಸೂತಿ ಆರೈಕೆ' ಯೋಜನೆ?

ಕರ್ನಾಟಕ ‘ಪ್ರಸೂತಿ ಆರೈಕೆ‘ ಯೋಜನೆಯು 2007ರಲ್ಲಿ ಜಾರಿಗೆ ಬಂದಿದೆ. ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಯೋಜನೆಯ ನೋಡಲ್ ಇಲಾಖೆಯಾಗಿದೆ.ಇದು ಶೇ 100 ಕರ್ನಾಟಕ ಸರ್ಕಾರದ ಅನುದಾನಿತ ಯೋಜನೆಯಾಗಿದೆ.

ಉದ್ದೇಶವೇನು?
ಈ ಯೋಜನೆಯ ಹಿಂದಿನ ಮುಖ್ಯ ಉದ್ದೇಶವೆಂದರೆ, ಮಹಿಳೆಯರಿಗೆ ತಮ್ಮ ಪ್ರಸವದ ನಂತರದ ವೆಚ್ಚಗಳನ್ನು ನೋಡಿಕೊಳ್ಳಲು ಹಣಕಾಸಿನ ನೆರವು ನೀಡುವುದಾಗಿದೆ.

ಹಣ ಪಾವತಿ ಹೇಗೆ?:

ಫಲಾನುಭವಿಗಳಿಗೆ ಎರಡು ಹಂತದಲ್ಲಿ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ.

ADVERTISEMENT

ಮೊದಲ ಕಂತು: ಫಲಾನುಭವಿಗಳಿಗೆ ಗರ್ಭಧಾರಣೆಯ 2ನೇ ತ್ರೈಮಾಸಿಕದ ಅವಧಿಯಲ್ಲಿ (13-28 ವಾರ) ನೀಡಲಾಗುತ್ತದೆ.

2ನೇ ಕಂತು: ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ನೀಡಲಾಗುತ್ತದೆ.

ಸಹಾಯಧನದ ಮೊತ್ತ
  • ಸಾಮಾನ್ಯ ವರ್ಗದ ಮಹಿಳೆಯರಿಗೆ ₹2,000

  • ಎಸ್‌ಸಿ, ಎಸ್‌ಟಿ ವರ್ಗದ ಮಹಿಳೆಯರಿಗೆ ₹3000 ನೀಡಲಾಗುತ್ತದೆ.

ಯಾರು ಈ ಯೋಜನೆಯ ಪ್ರಯೋಜನ ಪಡೆಯಬಹುದು?

ಬಿಪಿಎಲ್ ಕಾರ್ಡ್‌ ಹೊಂದಿರುವ ಕುಟುಂಬದ ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ಮಹಿಳೆಯರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.

ಅರ್ಹತಾ ಮಾನದಂಡಗಳು

  • ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

  • ಗರ್ಭವತಿ ಹಾಗೂ ಹಾಲುಣಿಸುವ ತಾಯಂದಿರು.

  • ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗದ ಮಹಿಳೆಯರು.

  • ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯರು

  • ಬಿಪಿಎಲ್ ಕಾರ್ಡ್‌ ಹೊಂದಿರುವ ಮಹಿಳೆಯರು

ಅಗತ್ಯವಿರುವ ದಾಖಲೆಗಳು

  • ವಾಸಸ್ಥಳ ಪ್ರಮಾಣ ಪತ್ರ

  • ಬಿಪಿಎಲ್ ಕಾರ್ಡ್

  • ಎಎನ್‌ಸಿ ನೊಂದಣಿ ನಂಬರ್/ ತಾಯಿ ಕಾರ್ಡ್

  • ಮೊಬೈಲ್ ನಂಬರ್

  • ಬ್ಯಾಂಕ್ ಅಕೌಂಟ್ ನಂಬರ್.

  • ಜಾತಿ ಪ್ರಮಾಣ ಪತ್ರ.

  • ಆಧಾರ್ ಕಾರ್ಡ್.

ಅರ್ಜಿ ಸಲ್ಲಿಸುವ ವಿಧಾನ

ಗರ್ಭಿಣಿಯರು ತಮ್ಮ ಭಾಗದ ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು

ಅವರು(ಆಶಾ ಕಾರ್ಯಕರ್ತೆ) ಕರ್ನಾಟಕ ಪ್ರಸೂತಿ ಆರೈಕೆ ಯೋಜನೆ ಅಡಿ ನೊಂದಾಯಿಸುತ್ತಾರೆ ಮತ್ತು ಅಗತ್ಯ ತಪಾಸಣೆಗೆ ಸಹಾಯ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.