
ಎಐ ಚಿತ್ರ
ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕಾಯಕ ಕಿರಣ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಸ್ವ ಉದ್ಯೋಗಕ್ಕೆ ಸಹಾಯಧನ ನೀಡಲಾಗುತ್ತದೆ. ಪ್ರವರ್ಗ 3ಬಿ ಅಡಿಯಲ್ಲಿ ಬರುವ ಕರ್ನಾಟಕ ವೀರಶೈವ ಲಿಂಗಾಯಿತ ಹಾಗೂ ಅದರ ಉಪಜಾತಿಗೆ ಸೇರಿದವರು ಈ ಯೋಜನೆಯ ಲಾಭ ಪಡೆಯಬಹುದು ಎಂದು ರಾಜ್ಯ ಸರ್ಕಾರ ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ತಿಳಿಸಿದೆ.
ಈ ಯೋಜನೆ ಪಡೆಯಲು ಇರಬೇಕಾದ ಅರ್ಹತೆಗಳೇನು? ಯೋಜನೆಯಲ್ಲಿ ಸಿಗಲಿರುವ ಸಹಾಯಧನ ಎಷ್ಟು ಎಂಬ ಮಾಹಿತಿ ಇಲ್ಲಿದೆ.
ಅಭ್ಯರ್ಥಿಗಳು ಪ್ರವರ್ಗ–3ಬಿ ಗೆ ಸೇರಿದವರಾಗಿರಬೇಕು. ವೀರಶೈವ ಲಿಂಗಾಯತ ಹಾಗೂ ಉಪಜಾತಿಗೆ ಸೇರಿದವರಾಗಿರಬೇಕು.
ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಾಗಿದ್ದರೆ ₹98,000 ಹಾಗೂ ನಗರ ಪ್ರದೇಶದವರಾಗಿದ್ದರೆ ₹1.20 ಲಕ್ಷ ಮೀರಿರಬಾರದು.
ಕರ್ನಾಟಕದ ನಿವಾಸಿಯಾಗಿರಬೇಕು.
ಅರ್ಜಿದಾರರು ಕನಿಷ್ಠ 18 ವರ್ಷ ಗರಿಷ್ಠ 55 ವರ್ಷದೊಳಗೆ ಇರಬೇಕು.
ಸರ್ಕಾರದ ಇತರೆ ಯಾವುದೇ ನಿಗಮಗಳಿಂದ ಸಹಾಯಧನ ಅಥವಾ ಸಾಲ ಪಡೆದಿರಬಾರದು.
ಮಹಿಳೆಯರಿಗೆ ಶೇ 33ರಷ್ಟು ಹಾಗೂ ವಿಶೇಷಚೇತನರಿಗೆ ಶೇ 5ರಷ್ಟು ಮೀಸಲಾತಿ ಸಿಗಲಿದೆ.
ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಯೋಜನೆ ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿದಾರರಿಗೆ ವೈಯಕ್ತಿಕ ಸಾಲ ಶೇ 15ರಷ್ಟು ಸಹಾಯಧನದೊಂದಿಗೆ ₹2 ಲಕ್ಷ ದೊರೆಯಲಿದೆ.
ಯೋಜನೆಯ ಘಟಕ ವೆಚ್ಚಕ್ಕೆ ₹50,000 ಗಳವರೆಗೆ ಶೇ 30ರಷ್ಟು ಅಂದರೆ ₹10,000 ಗಳವರೆಗೆ ಸಹಾಯಧನ ಸಿಗಲಿದೆ. ಉಳಿಕೆ ಶೇ 70ರಷ್ಟು ₹40,000 ಕ್ಕೆ ವಾರ್ಷಿಕ ಶೇ 4ರ ಬಡ್ಡಿ ದರದಲ್ಲಿ ಸಾಲ ಸಿಗಲಿದೆ.
ಯೋಜನೆಯಲ್ಲಿ ₹50,000 ದಿಂದ ₹ 1ಲಕ್ಷದ ವರೆಗಿನ ಘಟಕ ವೆಚ್ಚಕ್ಕೆ ಶೇ 20ರಷ್ಟು ಅಂದರೆ ₹20,000 ಸಹಾಯಧನ ಸಿಗಲಿದೆ. ಉಳಿಕೆ ಶೇ 80ರಷ್ಟು ₹80,000 ಕ್ಕೆ ವಾರ್ಷಿಕ ಶೇ 4ರ ಬಡ್ಡಿದರದಲ್ಲಿ ಸಾಲ ಸಿಗಲಿದೆ.
ಘಟಕ ವೆಚ್ಚಕ್ಕೆ ₹ 1ಲಕ್ಷದಿಂದ ₹ 2ಲಕ್ಷದ ವರೆಗೆ ಶೇ 15ರಷ್ಟು ಅಂದರೆ, ₹20,000 ದಿಂದ ₹30,000ಗಳ ವರೆಗೂ ಸಹಾಯಧನ ಸಿಗಲಿದೆ. ಉಳಿಕೆ ಶೇ 85ರಷ್ಟು ₹1.7 ಲಕ್ಷಕ್ಕೆ ವಾರ್ಷಿಕ ಶೇ 2ರ ಬಡ್ಡಿಯಲ್ಲಿ ಸಾಲ ಸಿಗಲಿದೆ.
ಅಗತ್ಯ ದಾಖಲೆಗಳು ಯಾವುವು?
ಪಿತ್ರಾರ್ಜಿತ ಆಸ್ತಿಯಾಗಿದ್ದರೆ ಆಸ್ತಿ ವಿಭಾಗ ಪತ್ರ, ಎಂ.ಆರ್ ಕಾಫಿ ಒದಗಿಸಬೇಕು
ಪಹಣಿ
ಕಂದಾಯ ಪಾವತಿಸಿದ ರಶೀದಿ.
ಯೋಜನೆಯಲ್ಲಿ ಪಡೆದ ಸಾಲಕ್ಕೆ ವಾರ್ಷಿಕ ಶೇ 4ರ ಬಡ್ಡಿದರದಲ್ಲಿ 34 ಕಂತುಗಳಲ್ಲಿ ಮರು ಪಾವತಿ ಮಾಡಬೇಕು.
ಯೋಜನೆ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡುವುದು. ಇಲಾಖೆಯ ಅಂತರ್ಜಾಲ ತಾಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.