
ಗೆಟ್ಟಿ ಚಿತ್ರ
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಕುಸುಮ್ ಯೋಜನೆಯು ಒಂದು. ಈ ಯೋಜನೆಯ ಮುಖ್ಯ ಉದ್ದೇಶ ಕೃಷಿಯಲ್ಲಿ ಸೌರ ನೀರಾವರಿ ಪಂಪ್‌ಸೆಂಟ್ ಅಳವಡಿಸಲು ರೈತರಿಗೆ ಸಹಾಯಧನ ನೀಡುವುದಾಗಿದೆ.
ಇಂಧನ ಸಚಿವಾಲಯ ಜಾರಿಗೊಳಿಸುವ ಈ ಯೋಜನೆಯಲ್ಲಿ ಸೌರ ಪಂಪ್‌ಸೆಟ್ ಆಳವಡಿಸಿಕೊಳ್ಳುವ ರೈತರಿಗೆ ಶೇ 60ರಷ್ಟು ಸಹಾಯಧನ ಸಿಗಲಿದೆ. ಒಟ್ಟು ವೆಚ್ಚದಲ್ಲಿ ಶೇ 30ರಷ್ಟನ್ನು ಸರ್ಕಾರದಿಂದ ಸಾಲವಾಗಿ ನೀಡಲಾಗುತ್ತದೆ.
ಉದ್ದೇಶಗಳು:
ನೈಸರ್ಗಿಕ ಶಕ್ತಿಯನ್ನು ಬಳಕೆ ಮಾಡುವುದರಿಂದ ರೈತರು ಹೆಚ್ಚು ಪರಿಣಾಮಕಾರಿ ಹಾಗೂ ಪರಿಸರ ಸ್ನೇಹಿ ನೀರಾವರಿಗೆ ಸಹಾಕಾರಿಯಾಗಿದೆ.
ಉತ್ಪಾದನೆಯಾದ ಹೆಚ್ಚುವರಿ ವಿದ್ಯುತ್ ಶಕ್ತಿಯನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದು.
ಕುಸುಮ್ ಯೋಜನೆ 3 ಘಟಕಗಳನ್ನು ಒಳಗೊಂಡಿದೆ
ಘಟಕ ಎ: 10,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಕೇಂದ್ರವನ್ನು ಸ್ಥಾಪಿಸುವುದು. ಈ ಘಟಕದ ಅಡಿಯಲ್ಲಿ, 500 ಕಿಲೋ ವ್ಯಾಟ್ ನಿಂದ 2 ಮೆಗಾವ್ಯಾಟ್‌ವರೆಗೆ ವಿದ್ಯುತ್ ಮಾರಾಟ ಮಾಡಬಹುದು.
ಕಾಂಪೊನೆಂಟ್ ಬಿ: 7.5 ಎಚ್.ಪಿ ವರೆಗಿನ ವೈಯಕ್ತಿಕ ಸಾಮರ್ಥ್ಯದ ಮತ್ತು 17.5 ಲಕ್ಷ ಮೌಲ್ಯದ ಸ್ಯಾಂಡ್-ಅಲೋನ್ ಸೌರ ಪಂಪ್ ಸ್ಥಾಪಿಸುವುದು.
ಕಾಂಪೊನೆಂಟ್ ಸಿ: ತಲಾ 7.5 ಎಚ್.ಪಿ ಗೆ ಬೇಕಾಗುವ ವಿದ್ಯುತ್ ಉತ್ಪಾದನೆಗೆ ಆರ್ಥಿಕ ಬೆಂಬಲವನ್ನು ಒದಗಿಸಿ, ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಬಹುದಾಗಿದೆ.
ಪ್ರಯೋಜನಗಳು:
ಸರ್ಕಾರವು ಶೇ60 ರಷ್ಟು ಸಹಾಯಧನ ನೀಡುತ್ತದೆ. ಒಟ್ಟು ವೆಚ್ಚದ ಶೇ 30ರಷ್ಟು ಸಾಲ ಸಿಗಲಿದ್ದು,ಇದರಲ್ಲಿ ಶೇ10 ರಷ್ಟು ರೈತರು ಭರಿಸಬೇಕಾಗುತ್ತದೆ.
ಅತ್ಯಾಧುನಿಕ ಸೌರ ಪಂಪ್‌ಗಳ ಸ್ಥಾಪನೆಗೆ ಸಹಾಯಧನ ದೊರೆಯುತ್ತದೆ. ಅವು 720 ಮೆಗಾವ್ಯಾಟ್ ಸಾಮರ್ಥ್ಯವನ್ನು ಹೊಂದಿರುವುದರಿಂದ ನೀರಾವರಿಯನ್ನು ಸುಧಾರಿಸುತ್ತದೆ.
ವಿದ್ಯುತ್ ಸ್ಥಾವರಗಳಲ್ಲಿ ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಅನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡುವ ಅವಕಾಶವನ್ನು ನೀಡಲಾಗಿದೆ. ಇದು ರೈತರ ಆದಾಯ ಹೆಚ್ಚು ಮಾಡುತ್ತದೆ.
ಬಂಜರು ಮತ್ತು ಸಾಗುವಳಿ ಮಾಡದ ಭೂಮಿಯನ್ನು ಬಳಸಿಕೊಂಡು ಸ್ಥಿರ ಆದಾಯ ಗಳಿಸಬಹುದು.
ಕೃಷಿಯೋಗ್ಯ ಭೂಮಿಯಲ್ಲಿ ಸೌರ ಸ್ಥಾವರಗಳನ್ನು ಎತ್ತರದಲ್ಲಿ ಸ್ಥಾಪಿಸಲಾಗುತ್ತದೆ. ಆದರ ಕೆಳಗೆ ನಿಯಮಿತವಾಗಿ ಕೃಷಿ ಮಾಡಬಹುದು.
ಯಾರು ಯೋಜನೆಯನ್ನು ಪಡೆಯಬಹುದು:
ಒಬ್ಬ ರೈತ
ರೈತರ ಗುಂಪು
ಎಫ್‌ಪಿಒ ಅಥವಾ ರೈತ ಉತ್ಪಾದಕ ಸಂಘಗಳು
ಪಂಚಾಯತ್‌ಗಳು
ಸಹಕಾರ ಸಂಘಗಳು
ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್
ಭೂ ದಾಖಲೆಗಳು
ಬ್ಯಾಂಕ್ ಖಾತೆ
ಘೋಷಣಾ ಪತ್ರ
ಮೊಬೈಲ್ ಸಂಖ್ಯೆ
ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ಅಂತರ್ಜಾಲ ತಾಣವಾದ https://pmkusum.mnre.gov.in/#/landing ಗೆ ಭೇಟಿ ನೀಡಿ. ‘ನೋಂದಣಿ’ ಮೇಲೆ ಕ್ಲಿಕ್ ಮಾಡಿ.
ನಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಬಳಿಕ ‘ಸೌರ ಕೃಷಿ ಪಂಪ್‌ಸೆಟ್ ಸಬ್ಸಿಡಿ ಯೋಜನೆ’ ಗಾಗಿ ‘ಲಾಗಿನ್’ ಕ್ಲಿಕ್ ಮಾಡಿ.
ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಿದ ನಂತರ, ರೈತರು ಸೌರ ಪಂಪ್ ಘಟಕವನ್ನು ಸ್ಥಾಪಿಸಲು ಒಟ್ಟು ವೆಚ್ಚದ ಶೇ 10ರಷ್ಟು ಇಲಾಖೆಯಲ್ಲಿ ಠೇವಣಿ ಇಡಬೇಕು. ಸಹಾಯಧನ ಮಂಜೂರಾಗಲು 90 ರಿಂದ 10 ದಿನ ತೆಗೆದುಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.