ADVERTISEMENT

ಪ್ರಜಾವಾಣಿ ಕ್ವಿಜ್ 80

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 16 ಜುಲೈ 2019, 19:30 IST
Last Updated 16 ಜುಲೈ 2019, 19:30 IST

1. ಥೈರಾಯ್ಡ್ ಗ್ರಂಥಿ ದೇಹದ ಯಾವ ಭಾಗದಲ್ಲಿರುತ್ತದೆ?

ಅ) ಗಂಟಲು ಆ) ತಲೆ
ಇ) ಲಿವರ್ ಈ) ಹೊಟ್ಟೆ

2. ‘ಮೃಗತೃಷ್ಣಾ’ ಎಂಬ ಶಬ್ದದ ಸರಿಯಾದ ಅರ್ಥವೇನು?

ADVERTISEMENT

ಅ) ಪ್ರಾಣಿಬೇಟೆ ಆ) ಬಾಯಾರಿಕೆ
ಇ) ಮರೀಚಿಕೆ ಈ) ಚಂದ್ರ

3. ಆಭರಣಗಳ ತಯಾರಿಕೆಯಲ್ಲಿ ಚಿನ್ನಕ್ಕೆ ತಾಮ್ರವನ್ನು ಸೇರಿಸಲು ಕಾರಣವೇನು?

ಅ) ಕಾಂತಿ ನೀಡಲು

ಆ) ತೂಕ ಹೆಚ್ಚಿಸಲು
ಇ) ಗಟ್ಟಿಗೊಳಿಸಲು

ಈ) ಯಾವುದೂ ಅಲ್ಲ

4. ಚಂದ್ರನ ಮೇಲೆ ಯಾವ ವಿಕಿರಣಶೀಲಧಾತು ಅಗಾಧ ಪ್ರಮಾಣದಲ್ಲಿ ಶೇಖರಣೆಯಾಗಿದೆ?

ಅ) ಯುರೇನಿಯಂ ಆ) ಥೋರಿಯಂ
ಇ) ಹೀಲಿಯಂ ಈ) ಬಿಸ್ಮತ್

5. ಇವುಗಳಲ್ಲಿ ಯಾವ ಗಿಡದ ಎಲೆಯ ಸಾರವನ್ನು ಸಕ್ಕರೆಯ ಬದಲಾಗಿ ಬಳಸಲಾಗುತ್ತದೆ?

ಅ) ಸ್ಟೀವಿಯಾ ಆ) ಲೋಳೆಸರ
ಇ) ಕಬ್ಬು ಈ) ಜಟ್ರೋಪ

6. ಧಾರವಾಡ ಜಿಲ್ಲೆಯ ಗರಗ ಗ್ರಾಮವು ಯಾವುದರ ತಯಾರಿಕೆಗೆ ಹೆಸರುವಾಸಿಯಾಗಿದೆ?

ಅ) ಸೀರೆ ಆ) ಕಂಬಳಿ
ಇ) ಚರ್ಮವಸ್ತುಗಳು ಈ) ರಾಷ್ಟ್ರ ಧ್ವಜ

7. ‘ಓಂ ಣಮೋ’ ಕಾದಂಬರಿಯನ್ನು ಬರೆದ ಲೇಖಕರು ಯಾರು?

ಅ) ಯಶವಂತ ಚಿತ್ತಾಲ ಆ) ಶಾಂತಿನಾಥ ದೇಸಾಯಿ

ಇ) ಪೂರ್ಣಚಂದ್ರ ತೇಜಸ್ವಿ ಈ) ಪಿ.ಲಂಕೇಶ್

8. ಮಾರ್ಕ್ ಟುಲಿ ಯಾವ ಸುದ್ದಿ ಸಂಸ್ಥೆಯ ಭಾರತೀಯ ಶಾಖೆಯ ಮುಖ್ಯಸ್ಥರಾಗಿದ್ದರು?

ಅ)ಬಿಬಿಸಿ ಆ) ಸಿಎನ್ಎನ್
ಇ) ಯುಎನ್ಐ ಈ) ಪಿಟಿಐ

9. ಮಹಾಭಾರತದಲ್ಲಿ ದುರ್ಯೋಧನನ ಮಗನ ಹೆಸರೇನು?

ಅ) ಲಕ್ಷಣ ಕುಮಾರ ಆ) ಉತ್ತರ ಕುಮಾರ
ಇ) ವೀರ ಕುಮಾರ ಈ) ಧನ್ಯಕುಮಾರ

10. ಯಾವ ಕ್ಷೇತ್ರದ ವಿಶಿಷ್ಟ ಸಾಧಕರಿಗೆ ‘ಬೀರಬಲ್ ಸಹಾನಿ’ ಪ್ರಶಸ್ತಿಯನ್ನು ನೀಡಲಾಗುತ್ತದೆ?

ಅ) ಭೌತಶಾಸ್ತ್ರ ಆ) ರಸಾಯನಶಾಸ್ತ್ರ
ಇ) ಸಸ್ಯ ವಿಜ್ಞಾನ ಈ) ಖಗೋಳಶಾಸ್ತ್ರ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1.ಎಂಟು 2. ನಳಚಂಪೂ 3. ರಾಜೀವ್ ಗಾಂಧಿ 4. ಜಾತಕ ಕಥೆಗಳು 5. ಗೂಗಲ್ 6.ಉದಾಸೀನ ಮಾಡು 7. ಕೆಲಿಡಿಯೋ ಸ್ಕೋಪ್ 8. ಜೇಮ್ಸ್ 9. ಅರವತ್ತೈದು 10. ಚಂದ್ರಶೇಖರ ಕಂಬಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.