ADVERTISEMENT

ನನ್ನ ಪತ್ನಿ ಹೆಣ್ಣಲ್ಲ: ವಿಚ್ಛೇದನ ಕೊಡಿಸುವಂತೆ ಸುಪ್ರೀಂ ಮೊರೆ ಹೋದ ಪತಿ

ಏಜೆನ್ಸೀಸ್
Published 14 ಮಾರ್ಚ್ 2022, 6:24 IST
Last Updated 14 ಮಾರ್ಚ್ 2022, 6:24 IST
ಸುಪ್ರೀಂ
ಸುಪ್ರೀಂ   

ನವದೆಹಲಿ: ನನ್ನ ಪತ್ನಿ ಹೆಣ್ಣಲ್ಲ, ಗಂಡು ಎಂದು ದೂರಿರುವ ಪತಿಯೊಬ್ಬರು ವಿಚ್ಛೇದನ ಕೊಡಿಸುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬರು ವಿಚ್ಚೇದನ ಕೊಡಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆಗೆ ಸಮ್ಮತಿ ನೀಡಿರುವ ನ್ಯಾಯಪೀಠ, ನಾಲ್ಕು ವಾರಗಳ ಒಳಗೆ ಉತ್ತರ ನೀಡುವಂತೆ ದೂರು ನೀಡಿರುವ ಪತಿಯ ಪತ್ನಿಗೆ ಸೂಚಿಸಿದೆ.

ನನ್ನ ಪತ್ನಿ ಹೆಣ್ಣಲ್ಲ, ಪುರುಷ ಜನನಾಂಗ ಮತ್ತು ಅಪೂರ್ಣ ಕನ್ಯತ್ವ (ಯೋನಿ) ಹೊಂದಿದ್ದಾರೆ. ಇದನ್ನು ವೈದ್ಯಕೀಯ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಇದು ಕ್ರಿಮಿನಲ್‌ ಅಪರಾಧವಾಗಿದೆ. ನನ್ನ ಪತ್ನಿಗೆ ಹುಟ್ಟುವಾಗಲೇ ಎರಡು ಲಿಂಗಗಳು ಇವೆ. ಇವರು ಉದ್ದೇಶಪೂರ್ವಕವಾಗಿ ನನಗೆ ಮೋಸ ಮಾಡಿದ್ದಾರೆ. ಕೂಡಲೇ ನ್ಯಾಯಾಲಯ ವಿಚ್ಛೇದನ ಕೊಡಿಸಬೇಕುಎಂದು ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ.

ದೂರು ನೀಡಿರುವ ವ್ಯಕ್ತಿಯ ಪತ್ನಿಗೆ ಉತ್ತರಿಸಲು ಸುಪ್ರೀಂ ಕೋರ್ಟ್‌ ಸೂಚಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.