ADVERTISEMENT

ಅತಿಸಾರದಿಂದ ಮಕ್ಕಳ ಸಾವು; ಸಚಿನ್ ವಿಷಾದ

​ಪ್ರಜಾವಾಣಿ ವಾರ್ತೆ
Published 18 ಜನವರಿ 2016, 19:30 IST
Last Updated 18 ಜನವರಿ 2016, 19:30 IST
ಐಸಿಸಿ ಮತ್ತು ಯುನಿಸೆಫ್ ಸಹ ಭಾಗಿತ್ವದಲ್ಲಿ ಸೋಮವಾರ ದೆಹಲಿಯಲ್ಲಿ  ನಡೆದ ಕಾರ್ಯಕ್ರಮದಲ್ಲಿ  ಸಚಿನ್‌ ತೆಂಡೂಲ್ಕರ್ ಶುಚಿತ್ವದ ಕುರಿತು ಜಾಗೃತಿ ಮೂಡಿಸಿದರು
ಐಸಿಸಿ ಮತ್ತು ಯುನಿಸೆಫ್ ಸಹ ಭಾಗಿತ್ವದಲ್ಲಿ ಸೋಮವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿನ್‌ ತೆಂಡೂಲ್ಕರ್ ಶುಚಿತ್ವದ ಕುರಿತು ಜಾಗೃತಿ ಮೂಡಿಸಿದರು   

ನವದೆಹಲಿ (ಪಿಟಿಐ): ಪ್ರತಿದಿನವೂ 1600 ಮಕ್ಕಳು ಅತಿಸಾರದಿಂದ ಸಾವನ್ನಪ್ಪುತ್ತಿರುವುದು  ವಿಷಾದದ ಸಂಗತಿ ಎಂದು ಯುನಿಸೆಫ್ ಪ್ರಚಾರ ರಾಯಭಾರಿಯಾಗಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದರು.

ಐಸಿಸಿ ಮತ್ತು ಯುನಿಸೆಫ್ ಸಹ ಭಾಗಿತ್ವದಲ್ಲಿ ಸೋಮವಾರ ದೆಹಲಿಯಲ್ಲಿ  ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಕ್ಕಳು ಶುಚಿತ್ವ ಕಾಪಾಡಿಕೊಳ್ಳ ಬೇಕು. ತಾಯಂದಿರು ಮಕ್ಕಳಲ್ಲಿ ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ತಿಳಿವಳಿಕೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಕುಟುಂಬದಲ್ಲಿಯೂ ಅಮ್ಮಂದಿರ ಪಾತ್ರ ಮಹತ್ವದ್ದು’ ಎಂದರು.

‘ಬಯಲು ಶೌಚಾಲಯಕ್ಕೆ ತಡೆ, ಪ್ರತಿಯೊಂದು ಹಳ್ಳಿಗಳು, ಮನೆಗಳಲ್ಲಿ ನೈರ್ಮಲ್ಯದ ವಾತಾವರಣ ನಿರ್ಮಿಸುವುದರಿಂದ ಅತಿಸಾರದಂತಹ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ಸಾಧ್ಯವಿದೆ. ಇದಕ್ಕಾಗಿ ಸರ್ಕಾರ, ಸಾರ್ವಜನಿಕರು, ವಿವಿಧ ಕ್ಷೇತ್ರಗಳ ಗಣ್ಯರು ಒಂದಾಗಿ ಶ್ರಮಿಸಬೇಕು’ ಎಂದು ಸಚಿನ್ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.