ADVERTISEMENT

ಅಲ್‌ ಅಮೀನ್‌ಗೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 19:37 IST
Last Updated 12 ಅಕ್ಟೋಬರ್ 2017, 19:37 IST
ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಂತರ ಕಾಲೇಜು ಅಥ್ಲೆಟಿಕ್ಸ್‌ನ 1,500 ಮೀಟರ್ಸ್‌ ಓಟದ ವೇಳೆ ಕುಸಿದು ಬಿದ್ದ ಹಲಸೂರಿನ ಸೇಂಟ್‌ ಅನ್ನೆಸ್‌ ಕಾಲೇಜಿನ ಗಾಯತ್ರಿ ಅವರನ್ನು ಸಂತೈಸಿದ ಸಿಬ್ಬಂದಿ. -ಪ್ರಜಾವಾಣಿ ಚಿತ್ರ
ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಂತರ ಕಾಲೇಜು ಅಥ್ಲೆಟಿಕ್ಸ್‌ನ 1,500 ಮೀಟರ್ಸ್‌ ಓಟದ ವೇಳೆ ಕುಸಿದು ಬಿದ್ದ ಹಲಸೂರಿನ ಸೇಂಟ್‌ ಅನ್ನೆಸ್‌ ಕಾಲೇಜಿನ ಗಾಯತ್ರಿ ಅವರನ್ನು ಸಂತೈಸಿದ ಸಿಬ್ಬಂದಿ. -ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಲ್‌ ಅಮೀನ್‌ ಮತ್ತು ಜ್ಯೋತಿ ನಿವಾಸ ಕಾಲೇಜು ತಂಡದವರು ಬೆಂಗಳೂರು ವಿಶ್ವವಿದ್ಯಾಲಯದ 53ನೇ ಅಂತರ ಕಾಲೇಜು ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಅಲ್‌ ಅಮೀನ್‌ ಕಾಲೇಜು ತಂಡ 74 ಪಾಯಿಂಟ್ಸ್‌ ಗಳಿಸಿ ಪ್ರಾಬಲ್ಯ ಮೆರೆಯಿತು. ಸೌಂದರ್ಯ ಕಾಲೇಜು (43) ರನ್ನರ್ಸ್‌ ಅಪ್‌ ಸ್ಥಾನ ತನ್ನದಾಗಿಸಿಕೊಂಡಿತು.

ಮಹಿಳೆಯರ ವಿಭಾಗದಲ್ಲಿ ಜ್ಯೋತಿ ನಿವಾಸ ಕಾಲೇಜು  63 ಪಾಯಿಂಟ್ಸ್‌ ಗಳಿಸಿದರೆ, ಕೋಲಾರದ ಸರ್ಕಾರಿ ಕಾಲೇಜು ತಂಡದವರು (45) ರನ್ನರ್ಸ್‌ ಅಪ್‌ ಆದರು. ಸೇಂಟ್‌ ಜೋಸೆಫ್‌ ವಾಣಿಜ್ಯ ಕಾಲೇಜಿನ ಎಲ್‌.ಭರತ್‌ (995 ಪಾಯಿಂಟ್ಸ್‌) ಪುರುಷರ ವಿಭಾಗದ ‘ಶ್ರೇಷ್ಠ ಅಥ್ಲೀಟ್‌’ ಗೌರವ ಗಳಿಸಿದರು. ಅವರು ಗುರುವಾರ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ 10.7 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ತಮ್ಮದಾಗಿಸಿಕೊಂಡರು.

ADVERTISEMENT

ಕೆ.ಐ.ಎಂ.ಎಸ್‌.ಆರ್‌. ಕಾಲೇಜಿನ ಕಾವೇರಿ ಎಲ್‌.ಪಾಟೀಲ ಮಹಿಳಾ ವಿಭಾಗದ ‘ಶ್ರೇಷ್ಠ ಅಥ್ಲೀಟ್‌’ ಎಂಬ ಹಿರಿಮೆಗೆ ಪಾತ್ರರಾದರು.
100 ಮೀಟರ್ಸ್‌ನಲ್ಲಿ ಕಾವೇರಿ (12.20ಸೆ) ಚಿನ್ನಕ್ಕೆ ಕೊರಳೊಡ್ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.