ADVERTISEMENT

ಕಾಮನ್‌ವೆಲ್ತ್‌: ವೇಟ್‌ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪರ್‌ದೀಪ್‌ ಸಿಂಗ್‌

ಏಜೆನ್ಸೀಸ್
Published 9 ಏಪ್ರಿಲ್ 2018, 2:50 IST
Last Updated 9 ಏಪ್ರಿಲ್ 2018, 2:50 IST
ಪರ್‌ದೀಪ್‌ ಸಿಂಗ್‌...... ಚಿತ್ರಕೃಪೆ: ಹಿಂದೂಸ್ತಾನ್‌ ಟೈಮ್ಸ್‌
ಪರ್‌ದೀಪ್‌ ಸಿಂಗ್‌...... ಚಿತ್ರಕೃಪೆ: ಹಿಂದೂಸ್ತಾನ್‌ ಟೈಮ್ಸ್‌   

ಗೋಲ್ಡ್‌ಕೋಸ್ಟ್‌: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಸೋಮವಾರ ಮತ್ತೊಂದು ಬೆಳ್ಳಿ ಪದಕ ಲಭಿಸಿದೆ.

ಪುರುಷರ 105 ಕೆ.ಜಿ. ವಿಭಾಗದ ವೇಟ್‌ ಲಿಫ್ಟಿಂಗ್‌ನಲ್ಲಿ ಪರ್‌ದೀಪ್‌ ಸಿಂಗ್‌ ಬೆಳ್ಳಿ ಪದಕ ಗೆದ್ದಿದ್ದಾರೆ. ಒಟ್ಟು 352 ಕೆ.ಜಿ. ಭಾರ ಎತ್ತುವ ಮೂಲಕ ಸಿಂಗ್‌ ಈ ಸಾಧನೆ ಮಾಡಿದ್ದಾರೆ.

ಸ್ನ್ಯಾಚ್‌ ಪ್ರಯತ್ನದಲ್ಲಿ 152 ಕೆ.ಜಿ., ಕ್ಲೀನ್‌ ಮತ್ತು ಜರ್ಕ್‌ನಲ್ಲಿ 200 ಕೆ.ಜಿ. ಭಾರವನ್ನು ಎತ್ತುವ ಮೂಲಕ ಬೆಳ್ಳಿ ಪದಕವನ್ನು ಕೊರಳಿಗೇರಿಕೊಂಡರು. ಒಟ್ಟು 360 ಕೆ.ಜಿ. ಭಾರ ಎತ್ತಿದ ಸಮೊವಾದ ಸನೆಲೆ ಮಾವೊ ಚಿನ್ನಕ್ಕೆ ಮುತ್ತಿಕ್ಕಿದರು.

ADVERTISEMENT

ಪಂಜಾಬಿನ ಮಾಂಕಿ ಎಂಬ ಹಳ್ಳಿಯವರಾದ ಪರ್‌ದೀಪ್‌, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವಾಗಲೇ, ಶಿಕ್ಷಕರ ಸಲಹೆಗಳಿಂದ ವೇಟ್‌ ಲಿಫ್ಟಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.

ಭಾರತದ ಕ್ರೀಡಾಳುಗಳು ಈ ಕೂಟದಲ್ಲಿ ಈವರೆಗೂ 8 ಚಿನ್ನ, 3 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.