ADVERTISEMENT

ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಕಷ್ಟಕಾಲ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:30 IST
Last Updated 21 ಏಪ್ರಿಲ್ 2012, 19:30 IST

ಮುಂಬೈ (ಪಿಟಿಐ): ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಕಷ್ಟಕಾಲ ಕಳೆದು ಹೋಗಲೆಂದು ಪ್ರಾರ್ಥಿಸುತ್ತಿದೆ. ಸತತ ಎರಡು ಸೋಲಿನ ನಂತರ ಸಂಕಷ್ಟಕ್ಕೆ ಸಿಲುಕಿರುವ ಅದಕ್ಕೆ ಮುಂಬೈ ಇಂಡಿಯನ್ಸ್ ವಿರುದ್ಧದ ಭಾನುವಾರದ ಪಂದ್ಯವೂ ಸವಾಲಿನದ್ದಾಗಿದೆ.

ಬೆರಳಿಗೆ ಗಾಯವಾಗಿದ್ದ ಕಾರಣ ವಿಶ್ರಾಂತಿ ಪಡೆದಿದ್ದ ಸಚಿನ್ ತೆಂಡೂಲ್ಕರ್ ಆಗಮನವು ಮುಂಬೈ ಉತ್ಸಾಹ ಹೆಚ್ಚಿಸಿದೆ. ತನ್ನ ಕೊನೆಯ ಪಂದ್ಯದಲ್ಲಿ ದೆಹಲಿ ಡೇರ್‌ಡೆವಿಲ್ಸ್ ವಿರುದ್ಧ ಏಳು ವಿಕೆಟ್‌ಗಳ ಅಂತರದಿಂದ ಆಘಾತ ಅನುಭವಿಸಿದ್ದ ಹರಭಜನ್ ಸಿಂಗ್ ನಾಯಕತ್ವದ ಈ ತಂಡವು ಮತ್ತೆ ಯಶಸ್ಸಿನ ಹಾದಿ ಹಿಡಿಯುವ ಕನಸು ಕಾಣುತ್ತಿದೆ.

ತನ್ನ ನೆಲೆಯಲ್ಲಿ ಕಿಂಗ್ಸ್ ಇಲೆವೆನ್ ವಿರುದ್ಧ ಪ್ರಬಲ ಹೋರಾಟ ನಡೆಸಿ ಎರಡು ಪಾಯಿಂಟುಗಳನ್ನು ಖಾತೆಗೆ ಸೇರಿಸಿಕೊಳ್ಳುವುದು ಮುಂಬೈ ಇಂಡಿಯನ್ಸ್ ಗುರಿ. ಅದಕ್ಕೆ ಕ್ಕ ವಾತಾವರಣವಂತೂ ಇಲ್ಲಿದೆ. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳ ಬೆಂಬಲವೂ ಸಿಗುತ್ತದೆ. ಜೊತೆಗೆ ಸಚಿನ್ ಆಡುವುದರಿಂದ ಬ್ಯಾಟಿಂಗ್ ವಿಭಾಗಕ್ಕೂ ಬಲ. ಈ ಎಲ್ಲ ಅಂಶಗಳು `ಭಜ್ಜಿ~ ಪಡೆಯು ಗೆಲ್ಲುವ ನೆಚ್ಚಿನ ತಂಡ ಎನ್ನಲು ಕಾರಣ.

ಐಪಿಎಲ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯಲ್ಲಿ ಈವರೆಗೆ ಆಡಿರುವ ಪಂದ್ಯಗಳಲ್ಲಿನ ಸೋಲು ಗೆಲುವಿನ ಲೆಕ್ಕಾಚಾರದಲ್ಲಿಯೂ ಮುಂಬೈ ಎತ್ತರದಲ್ಲಿದೆ. ಅದು ಐದು ಪಂದ್ಯಗಳಲ್ಲಿ ಮೂರರಲ್ಲಿ ವಿಜಯ ಸಾಧಿಸಿದೆ. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದವರು ಆಡಿದ ಪಂದ್ಯಗಳು ಆರು. ಜಯ ಸಿಕ್ಕಿದ್ದು ಎರಡರಲ್ಲಿ ಮಾತ್ರ. ಮೊಹಾಲಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕಡಿವಾಣ ಹಾಕಲು ಸಾಧ್ಯವಾಗದೆ ಅದು ಪರದಾಡಿತು.

ಪಂದ್ಯ ಆರಂಭ: ಸಂಜೆ 4.00ಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.